ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಆನೆ ‘ವಿಜಯಾ’ಗೆ ಹೆಣ್ಣು ಮರಿ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಕುಶಾಲನಗರ: ಮೈಸೂರು ದಸರಾ ಮೆರವಣಿಗೆ­ಯಲ್ಲಿ ಅಂಬಾರಿ ಆನೆ ಅರ್ಜುನನ ಪಕ್ಕದಲ್ಲಿ ಸಾಗುವ 55 ವರ್ಷದ ಹೆಣ್ಣಾನೆ ‘ವಿಜಯಾ‘ ಸೋಮವಾರ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ. ಆರೇಳು ವರ್ಷಗಳಿಂದ ಮೈಸೂರು ದಸರಾದಲ್ಲಿ ಭಾಗವಹಿಸುತ್ತಿದ್ದ ವಿಜಯಾ, ಈ ಬಾರಿಯೂ ದಸರಾ ಮಹೋತ್ಸವಕ್ಕೆ ತೆರಳಲು ವೈದ್ಯರಿಂದ ಆಯ್ಕೆಯಾಗಿತ್ತು. 

ಇದುವರೆಗೆ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರದಲ್ಲಿದ್ದ ವಿಜಯಾ, ನಾಲ್ಕು ದಿನಗಳಿಂದ ಮೈಸೂರಿಗೆ ತೆರಳುವುದಕ್ಕಾಗಿ ‘ಆನೆ ಕಾಡು’ ಅರಣ್ಯದಲ್ಲಿ ಬೀಡುಬಿಟ್ಟಿತ್ತು. ಮಾವುತ, ಕಾವಾಡಿಗರಾದ ದೊರೆಯಪ್ಪ ಮತ್ತು ಭೋಜಪ್ಪ ಇದರ ಆರೈಕೆಯಲ್ಲಿ ತೊಡಗಿದ್ದಾರೆ.
ಮರಿ ಹಾಕಿರುವುದರಿಂದ ವಿಜಯಾ ದಸರಾ ಉತ್ಸವದಲ್ಲಿ ಪಾಲ್ಗೊಳ್ಳದೆ ದುಬಾರೆ ಆನೆ ಶಿಬಿರಕ್ಕೆ ಮರಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT