ಬೆಳಗಾವಿ: `ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಮತೀಯ ಹಿಂಸಾಚಾರ ತಡೆ ಮಸೂದೆ ಜಾರಿಗೆ ತಂದು ದೇಶವನ್ನು ಧರ್ಮದ ಆಧಾರದಲ್ಲಿ ಇಬ್ಭಾಗ ಮಾಡಲು ಹೊರಟಿದೆ~ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ ಜೇಟ್ಲಿ ಭಾನುವಾರ ಇಲ್ಲಿ ಆರೋಪಿಸಿದರು.

ಅಧಿವಕ್ತಾ ಪರಿಷತ್ ಹಮ್ಮಿಕೊಂಡಿದ್ದ `ಮತೀಯ ಹಿಂಸಾಚಾರ ತಡೆ ಮಸೂದೆ- 2011~ ಕುರಿತ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

`ಧರ್ಮದ ಆಧಾರದ ಮೇಲೆ ಕಾನೂನು ಜಾರಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಇದು ದೇಶದಲ್ಲಿನ ಕೋಮು ಸೌಹಾರ್ದಕ್ಕೆ ಧಕ್ಕೆ ತರಲಿದೆ. ಈ ಮಸೂದೆ, ಬಹುಸಂಖ್ಯಾತರು ಮಾತ್ರ ಮತೀಯ ಹಿಂಸಾಚಾರ ಮಾಡುತ್ತಾರೆ ಎಂದು ಹೇಳುತ್ತದೆ. ಇದರಲ್ಲಿ ಅಲ್ಪ ಸಂಖ್ಯಾತರನ್ನು ಶಿಕ್ಷಿಸುವ ಬಗ್ಗೆ ಉಲ್ಲೇಖವಿಲ್ಲ.

ಇದು ಜಾರಿಯಾದರೆ, ಭಯೋತ್ಪಾದನಾ ಸಂಘಟನೆಯವರಿಗೆ ನೇರವಾಗಿ ಮತೀಯ ಹಿಂಸಾಚಾರ ಕೈಗೊಳ್ಳಲು ಅವಕಾಶ ನೀಡಿದಂತಾಗುತ್ತದೆ~ ಎಂದು ಜೇಟ್ಲಿ ಆತಂಕ ವ್ಯಕ್ತಪಡಿಸಿದರು. ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಈ ಮಸೂದೆಯನ್ನು ಅಂಗೀಕರಿಸುವುದಕ್ಕೆ ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.