ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ನೆಲದಲ್ಲಿ ಹೂತ ರಥದ ಚಕ್ರಗಳು

Last Updated 1 ಏಪ್ರಿಲ್ 2015, 12:37 IST
ಅಕ್ಷರ ಗಾತ್ರ

ನಂಜನಗೂಡು: ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಪ್ರಯುಕ್ತ ಬುಧವಾರ ನಡೆದ ಪಂಚಮಹಾ ರಥೋತ್ಸವದ ವೇಳೆ ಶ್ರೀಕಂಠೇಶ್ವರ ಸ್ವಾಮಿಯ 110 ಟನ್ ಭಾರದ ಗೌತಮ ರಥ ಹಾಗೂ ಪಾರ್ವತಮ್ಮನವರ ರಥದ ಚಕ್ರಗಳು ನೆಲದಲ್ಲಿ ಹೂತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಥಬೀದಿಯಲ್ಲಿ ನೀರಿನ ಪೈಪ್ ಹೂಳಲು ತೆಗೆದಿದ್ದ ಗುಂಡಿಯನ್ನು ಸರಿಯಾಗಿ ಮುಚ್ಚದೆ ರಥೋತ್ಸವ ನಡೆಸಿದ್ದರಿಂದ ರಾಕ್ಷಸ ಮಂಟಪ ವೃತ್ತದ ಬಳಿ ರಥದ ಚಕ್ರಗಳು ಮಣ್ಣಿನಲ್ಲಿ ಹೂತುಕೊಂಡು ಮೇಲೆತ್ತಲು ಪ್ರಯಾಸ ಪಡಬೇಕಾಯಿತು. ನಂತರ ಕ್ರೇನ್ ಮತ್ತು ಜೆಸಿಬಿ ಯಂತ್ರ ಬಳಸಿ ರಥಗಳನ್ನು ಸ್ವಸ್ಥಾನ ಸೇರಿಸಲಾಯಿತು.

50 ನಿಮಿಷದ ಅವಧಿಯಲ್ಲಿ ಸ್ವಸ್ಥಾನ ಸೇರುತ್ತಿದ್ದ ರಥಗಳು ಅಡಚಣೆಯಿಂದಾಗಿ 3 ಗಂಟೆಗಳ ಅವಧಿ ಪಡೆದವು. ಅಲ್ಲದೆ, ಹೊಸದಾಗಿ ಖರೀದಿಸಿದ್ದ ರಥದ ಹಗ್ಗವು ಜಗ್ಗಾಟದಿಂದ 2 ಬಾರಿ ತುಂಡಾಗಿದ್ದರಿಂದ ಮತ್ತೆ ಹಳೆಯ ಹಗ್ಗವನ್ನೇ ಬಳಸಿ ರಥ ಎಳೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT