ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಲಪಾಡ್ ಪ್ರಕರಣದಿಂದ ಮುಜುಗರ: ಪ್ರಕಾಶ್‌ ರೈ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮೈಸೂರು: ‘ಮೊಹಮ್ಮದ್‌ ನಲಪಾಡ್‌ನನ್ನು ಹೊಗಳಿದ್ದು ಖಂಡಿತ ಈಗ ಮುಜುಗರ ಉಂಟು ಮಾಡಿದೆ. ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸ
ಬೇಕು. ಪೂರ್ವಾಪರ ತಿಳಿದು ಹೊಗಳಬೇಕು’ ಎಂದು ಪ್ರಕಾಶ್‌ ರೈ ಇಲ್ಲಿ ಸೋಮವಾರ ಹೇಳಿದರು.

‘ಎಲ್ಲಾ ಪಂಥದವರು ಒಂದೇ ಕಡೆ ಸೇರಿರುವುದು ಒಳ್ಳೆಯದು ಎಂದು ಅಂದಿನ ಕಾರ್ಯಕ್ರಮದಲ್ಲಿ ಹೇಳಿದ್ದೆ. ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ಹ್ಯಾರಿಸ್‌ ಪುತ್ರ ನಲಪಾಡ್‌ ಹಣ ನೀಡಿದ್ದರು. ಹೀಗಾಗಿ, ಯುವಕರು ಇಂಥ ಗುಣಬೆಳೆಸಿಕೊಳ್ಳಬೇಕು ಎಂದು ಬೆನ್ನು
ತಟ್ಟಿದ್ದೆ. ಆದರೆ, ಆತನ ಮನಸ್ಸಿನಲ್ಲಿ ರಾಕ್ಷಸನಿದ್ದಾನೆ ಎಂಬುದು ಗೊತ್ತಿರಲಿಲ್ಲ‌’ ಎಂದು ಅವರು ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

‘ಹೆಗಡೆ ಕೌಶಲ ಭಯ ಮೂಡಿಸುತ್ತಿದೆ’

‘ಸಚಿವ ಅನಂತಕುಮಾರ ಹೆಗಡೆ ಅವರ ಕೌಶಲ ಭಯ ಮೂಡಿಸುತ್ತಿದೆ. ಕೌಶಲಾಭಿವೃದ್ಧಿ ಬಗ್ಗೆ ಭಾಷಣ ಮಾಡುವ ಬದಲು ಅಲ್ಪಸಂಖ್ಯಾತರ ಕುರಿತು ಕೀಳಾಗಿ ಮಾತನಾಡುತ್ತಾರೆ. ಇಂಥ ರಾಕ್ಷಸರ ಬಗ್ಗೆ ಆತಂಕ ಉಂಟಾಗುತ್ತಿದೆ’ ಎಂದು ರೈ ವಾಗ್ದಾಳಿ ನಡೆಸಿದರು.

‘ಒಂದು ಸಮುದಾಯ, ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವ ಇಂಥವರು ದೇಶದ ನಾಯಕರೇ? ಇಂಥವರ ಮಾತು ಕೇಳಿಸಿಕೊಂಡು ಜನ ಏಕೆ ಸುಮ್ಮನಿದ್ದಾರೆ’ ಎಂದು ಪ್ರಶ್ನಿಸಿದರು.

‘ಸಂಸದ ಪ್ರತಾಪಸಿಂಹ ಅವರು ಸೊಂಟದ ಕೆಳಗಿನ ಭಾಷೆ ಬಳಸುತ್ತಾರೆ. ತಾಯಿ, ಹೆಂಡತಿ ಬಗ್ಗೆ ಕೀಳಾಗಿ ಮಾತನಾಡುತ್ತಾರೆ’ ಎಂದು ಹರಿಹಾಯ್ದರು.

***

ಕೇಂದ್ರ ಕೌಶಲಾಭಿವೃದ್ಧಿ ಸಚಿವರೂ ಆದ ಹೆಗಡೆ ಒಗಟಿನಂತೆ ಹೇಳಿದ್ದಾರೆ. ತಮ್ಮ ಇಲಾಖೆ ಮೂಲಕ ಎಲ್ಲರಿಗೂ ಆ ಕೌಶಲ ಕಲಿಸಲಿ !
-ರಾಮಲಿಂಗಾರೆಡ್ಡಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT