ಶಿರಸಿ (ಉತ್ತರ ಕನ್ನಡ): ಹಿರಿಯ ರಂಗಕರ್ಮಿ ಕೆ.ವಿ. ಅಕ್ಷರ ಅವರಿಗೆ ವಿಮರ್ಶಕ ಟಿ.ಪಿ. ಅಶೋಕ ಅವರು ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸಮಿತಿಯು ರಜತ ವರ್ಷಾಚರಣೆಯ ಸಂದರ್ಭದಲ್ಲಿ ಬಿಎಚ್‌ಶ್ರೀ ಅವರ ಜನ್ಮದಿನವಾದ ಶುಕ್ರವಾರ (ಇದೇ 24) ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಸಾಹಿತ್ಯ ಕ್ಷೇತ್ರದಲ್ಲಿ ಪೂರ್ವ ತನ್ನೊಳಗಿನ ಪಶ್ಚಿಮವನ್ನು ಹಾಗೂ ಪಶ್ಚಿಮ ತನ್ನೊಳಗಿನ ಪೂರ್ವವನ್ನು ಕಂಡುಕೊಂಡರೆ ಇವೆರಡಕ್ಕೂ ನೆಲೆ ಸಿಗಲು ಸಾಧ್ಯವಾಗುತ್ತದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಕೆ.ವಿ. ಅಕ್ಷರ ಹೇಳಿದರು.

ವಿಮರ್ಶಕ ಆರ್.ಡಿ. ಹೆಗಡೆ, ಪ್ರೊ. ಎಚ್.ಆರ್. ಅಮರನಾಥ ಅವರು ಶ್ರೀಧರ ಕುರಿತು ಮಾತನಾಡಿದರು. ಪ್ರೊ. ಎಂ.ಜಿ. ಹೆಗಡೆ ಅವರು ಅಕ್ಷರರ ಕೃತಿ ಕುರಿತು ಮಾತನಾಡಿದರು. ಲೋಹಿತ್ ಮಹಾಲೆ ಅವರಿಗೆ ಬಿಎಚ್‌ಶ್ರೀ ಶಿಕ್ಷಣ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.