ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯ್ತಿಯ ಆಡಳಿತ ಬಿಜೆಪಿ ಕೈಯಲ್ಲಿದ್ದರೂ, ಭಿನ್ನಮತ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗದ ಆ ಪಕ್ಷದ ನಾಯಕರ ವೈಫಲ್ಯದಿಂದಾಗಿ ಶುಕ್ರವಾರದ ಉಪಾಧ್ಯಕ್ಷ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿತು.

32 ಸದಸ್ಯ ಬಲದ ಈ ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ 18 ಮತ್ತು ಕಾಂಗ್ರೆಸ್ 14 ಸದಸ್ಯರನ್ನು ಹೊಂದಿದೆ. ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಬಿಜೆಪಿಗೆ ಇತ್ತು. ಎರಡು ಬಣವಾಗಿ ವಿಭಜನೆಗೊಂಡಿರುವ ಬಿಜೆಪಿಯಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಸದಸ್ಯರಾದ ಕೃಷ್ಣ ಓಗೆಣ್ಣವರ, ಲಕ್ಷ್ಮೀಬಾಯಿ ನ್ಯಾಮಗೌಡ, ಮಹಾದೇವಿ ಮೂಲಿಮನಿ ಕಣಕ್ಕಿಳಿದರು.

ಬಿಜೆಪಿ ಸದಸ್ಯರ ಮತಗಳು ಈ ಅಭ್ಯರ್ಥಿಗಳ ನಡುವೆ ಹಂಚಿಹೋದವು. ಇದರ ಲಾಭ ಪಡೆಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್, ತನ್ನ ಅಧಿಕೃತ ಅಭ್ಯರ್ಥಿ ದುಂಡಪ್ಪ ಲಿಂಗರೆಡ್ಡಿ ಅವರಿಗೆ ಎಲ್ಲ 14 ಮತಗಳು ಬೀಳುವಂತೆ ಮಾಡುವ ಮೂಲಕ ಉಪಾಧ್ಯಕ್ಷ ಸ್ಥಾನವನ್ನು ಸುಲಭವಾಗಿ ಗೆದ್ದುಕೊಂಡಿತು.

ಅಧ್ಯಕ್ಷರ ವಿರುದ್ಧ ಆಕ್ರೋಶ: `ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಸೋಲಲು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೇ ಕಾರಣ~ ಎಂದು ಬಿಜೆಪಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಸೇರಿದಂತೆ 8 ಜನ ಸದಸ್ಯರು ಆರೋಪ ಮಾಡಿದರು.

`ಚುನಾವಣೆ ಸಂದರ್ಭದಲ್ಲಿ ಒಬ್ಬರನ್ನೇ ಕಣಕ್ಕಿಳಿಸಿ ವಿಪ್ ಜಾರಿ ಮಾಡಬೇಕು~ ಎಂದು ರಾಜ್ಯ ಘಟಕದ ಅಧ್ಯಕ್ಷರು ಆದೇಶಿಸಿದ್ದರೂ, ಜಿಲ್ಲಾ ಅಧ್ಯಕ್ಷ ವಿಪ್ ಜಾರಿಗೊಳಿಸದೇ ಕಾಂಗ್ರೆಸ್ ಗೆಲುವಿಗೆ ವೇದಿಕೆ ಕಲ್ಪಿಸಿದರು~ ಎಂದು ದೂರಿದರು.

`ಚುನಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ವ ನಿಯೋಜಿತ. ಈ ಘಟನೆಯಿಂದ ಪಕ್ಷದ ನಿಷ್ಠಾವಂತರಿಗೆ ತೀವ್ರ ನೋವಾಗಿದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.