ಬೆಂಗಳೂರು: ವಿಧಾನಸಭೆಯ ಅಧಿವೇಶನದಲ್ಲಿ ಅಧಿಕೃತ ಕಲಾಪ ಆರಂಭವಾದ ಮೊದಲ ದಿನವೇ ಸಚಿವರು, ಆಡಳಿತ ಪಕ್ಷದ ಶಾಸಕರು ನಾಪತ್ತೆಯಾಗಿದ್ದರು. ಇದನ್ನು ಖಂಡಿಸಿದ ವಿರೋಧ ಪಕ್ಷದ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದರು. ಆದರೆ ಎಲ್ಲರನ್ನೂ `ಸಮಾಜವಾದಿ ಮೇಷ್ಟ್ರು' ಸಮಾಧಾನಪಡಿಸಿದರು.

ಬೆಳಿಗ್ಗೆ ಸದನ ಸೇರಿದಾಗ ಆಡಳಿತ ಪಕ್ಷದ ಕಡೆ ಸಚಿವರು ಮತ್ತು ಶಾಸಕರು ಕಡಿಮೆ ಸಂಖ್ಯೆಯಲ್ಲಿದ್ದರು. ಇದನ್ನು ಬಿಜೆಪಿಯ ಸಿ.ಟಿ.ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಜೆಡಿಎಸ್ನ ಸುರೇಶಬಾಬು ಟೀಕಿಸಿದರು. `ಆಡಳಿತ ಪಕ್ಷದವರಿಗೆ ಸದನ ನಡೆಸಲು ಆಸಕ್ತಿ ಇಲ್ಲ. ಹೀಗಾಗಿ ಮುಂದೂಡಬೇಕು' ಎಂದು ಆಗ್ರಹಪಡಿಸಿದರು.

`ಸದನ ಮುಂದೂಡುವುದು ಬೇಡ. ನಾನು ಸರ್ಕಾರಕ್ಕೆ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ನೀವು ಸುಮ್ಮನೆ ಇರಬೇಕು' ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಎಚ್ಚರಿಸಿದರು. ಆಗ ಜಗದೀಶ ಶೆಟ್ಟರ್ ಅವರು `ಕಾಂಗ್ರೆಸ್ ಸದಸ್ಯರಿಗೆ ಇನ್ನೂ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಸಮಯ ಸಿಕ್ಕಿಲ್ಲ' ಎಂದು ರೇಗಿಸಿದರು. `ಪ್ರಮಾಣ ವಚನ ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಈಗ ಅದರ ಚರ್ಚೆ ಬೇಡ' ಎಂದು ಅದನ್ನು ಅಲ್ಲಿಗೇ ಸಮಾಪ್ತಿಗೊಳಿಸಿದರು.

ಬಳಿಕ ಸಭಾನಾಯಕ ಸಿದ್ದರಾಮಯ್ಯ ಸದನಕ್ಕೆ ಬಂದರು. `ಸಭೆ ಆರಂಭ ಆಗುವುದಕ್ಕೂ ಮೊದಲು ಸಚಿವರು ಸದನದಲ್ಲಿ ಇರುವ ಹಾಗೆ ಮಾಡುತ್ತೇನೆ' ಎಂದರು. ಆಗ ತಿಮ್ಮಪ್ಪ ಅವರು `ಆಯ್ತಲ್ಲ. ಸಭಾನಾಯಕರೇ ಹೇಳಿದ್ದಾರೆ. ಇನ್ನು ಸುಮ್ಮನೇ ಕೂರಬೇಕು' ಎಂದು ಎಲ್ಲರನ್ನೂ ಸಮಾಧಾನಪಡಿಸಿದರು.

ಭೋಜನ ವಿರಾಮದ ನಂತರ ಸದನ ಆರಂಭವಾದಾಗ ಮೂವರು ಸಚಿವರು (ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ, ಕೃಷ್ಣಬೈರೇಗೌಡ) ಹಾಜರಿದ್ದರು. ಇದನ್ನು ಗಮನಿಸಿದ ಬಿಜೆಪಿಯ ಆರ್.ಅಶೋಕ, ಸಿ.ಟಿ.ರವಿ, ಡಿ.ಎನ್.ಜೀವರಾಜ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರವನ್ನು ಎತ್ತಿಕೊಂಡು ಹೋಗಲು ನಾಲ್ಕು ಜನ ಬೇಕು. ಆದರೆ, ಮೂವರು ಮಾತ್ರ ಇದ್ದಾರೆ. ಇದು ಯಾವ ನ್ಯಾಯ ಎಂದು ಅಶೋಕ ಚುಚ್ಚಿದರು. ಸ್ವಲ್ಪ ಹೊತ್ತು ಸದನವನ್ನು ಮುಂದೂಡಿ ಎಂದು ಆಗ್ರಹಿಸಿದರು. ಸಚಿವರು ಹಾಜರಿರುವಂತೆ ಸರ್ಕಾರಕ್ಕೆ ಕಿವಿ ಮಾತು ಹೇಳಿ ಎಂದು ಕಾಗೇರಿ ಅವರು ಪದೇ ಪದೇ ಸ್ಪೀಕರ್ಗೆ ಮನವಿ ಮಾಡಿದರು.

`ನಿಮ್ಮ ಪ್ರಶ್ನೆ ಗಂಭೀರವಾಗಿದೆ ನಿಜ. ಸದನ ಮುಂದೂಡುವುದು ಬೇಡ' ಎಂದು ತಿಮ್ಮಪ್ಪ ಹೇಳಿದರು. ಆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಬಂದರು. ಸದನದಲ್ಲಿ ಸಚಿವರು ಇರಬೇಕು. `ಎಲ್ಲಿದ್ದಾರೆ ನೋಡಪ್ಪಾ' ಎಂದು ಆಡಳಿತ ಪಕ್ಷದ ಕಡೆಯ ಶಾಸಕರೊಬ್ಬರನ್ನು ಉದ್ದೇಶಿಸಿ ತಿಮ್ಮಪ್ಪ ಹೇಳಿದರು.

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಚುರುಕು
`ಪಾಯಿಂಟು ಪಾಯಿಂಟು ಮಾತನಾಡಬೇಕು. ಹೇಳಿದ್ದನ್ನೇ ಹೇಳಬೇಡಿ.....'. ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಭಾಧ್ಯಕ್ಷರು ಚುರುಕು ಮುಟ್ಟಿಸಿದ್ದು ಹೀಗೆ.

ಗುಟ್ಕಾ ನಿಷೇಧ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆ ಮೇಲೆ ನಡೆದ ಚರ್ಚೆ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪದೇ ಪದೇ ಹೇಳಿದ್ದನ್ನೇ ಹೇಳುತ್ತಿದ್ದರು. `ನೀವು ಕೂಡ ಅಡಿಕೆ ಬೆಳೆಗಾರರು ಇರುವ ಭಾಗದಿಂದ (ಸಾಗರ) ಬಂದಿದ್ದೀರಿ. ಹಿರಿಯರಿದ್ದೀರಿ' ಎಂದು ಕಾಗೇರಿ ಪೀಠಿಕೆ ಹಾಕಿದ್ದನ್ನು ತಿಮ್ಮಪ್ಪ ವಿರೋಧಿಸಿದರು. `ಅದೆಲ್ಲ ಬೇಡ, ನೇರ ವಿಷಯಕ್ಕೆ ಬನ್ನಿ' ಎಂದು ಎಷ್ಟು ಬಾರಿ ಹೇಳಿದರೂ ಕಾಗೇರಿ ಮಾತ್ರ ಮತ್ತೆ ಅದೇ ವಿಷಯವನ್ನು ಪ್ರಸ್ತಾಪಿಸಿದರು.

ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂಬುದನ್ನು ಹಲವು ಬಾರಿ ಹೇಳಿದರು. ಇದರಿಂದ ಸಿಟ್ಟಾದ ತಿಮ್ಮಪ್ಪ ಅವರು ಹೇಗೆ ಸಂಕಷ್ಟದಲ್ಲಿದ್ದಾರೆ? ಗುಟ್ಕಾ ನಿಷೇಧದಿಂದ ಆಗುವ ಪರಿಣಾಮಗಳು ಏನು ಎಂಬುದನ್ನು ಸದನಕ್ಕೆ ತಿಳಿಸಿ. ಅದು ಬಿಟ್ಟು ಏನೇನೋ ಹೇಳುತ್ತಿದ್ದೀರಲ್ಲ ಎಂದು ಚುಚ್ಚಿದರು.

ರಾಜ್ಯಪಾಲರ ಭಾಷಣದಲ್ಲಿನ `ಕಾವೇರಿ ಐತೀರ್ಪಿನ ಅನುಸಾರ' ಎನ್ನುವ ಪದಗಳು ಚರ್ಚೆಗೆ ಗ್ರಾಸ ನೀಡಿದವು. ಇದನ್ನು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದ ನಂತರ ಸದನದಲ್ಲಿ ಗದ್ದಲ ಉಂಟಾಯಿತು. ಆ ಸಂದರ್ಭದಲ್ಲಿ ಹೆಡ್ಮಾಸ್ಟರ್ ರೀತಿ ಎಲ್ಲರನ್ನೂ ನಿಯಂತ್ರಿಸಿದರು. ಹೆಚ್ಚು ಗದ್ದಲ ಆದಾಗ ಎದ್ದು ನಿಂತು, ಸದಸ್ಯರನ್ನು ಸಮಾಧಾನಪಡಿಸಿದರು.

ಏಳಬೇಡಿ: ಕಾಗೋಡು ಅವರು ಪದೇ ಪದೇ ಎದ್ದು ನಿಂತು ಮಾತನಾಡುತ್ತಿದ್ದನ್ನು ಬಿಜೆಪಿಯ ಜಗದೀಶ ಶೆಟ್ಟರ್ ಆಕ್ಷೇಪ ಎತ್ತಿದರು. `ಸಭಾಧ್ಯಕ್ಷರು ಕುರ್ಚಿ ಮೇಲೆ ಕುಳಿತು ಮಾತನಾಡಬೇಕು. ಅದು ಬಿಟ್ಟು ನೀವೇ ಎದ್ದು ನಿಂತರೆ ನಾವೆಲ್ಲ ಏನು ಮಾಡುವುದು' ಎಂದು ಪ್ರಶ್ನಿಸಿದರು. ನಂತರ ತಿಮ್ಮಪ್ಪ ಅವರು `ಆಯ್ತು.. ಆಯ್ತು..' ಎಂದು ಕುರ್ಚಿ ಮೇಲೆ ಆಸೀನರಾದರು. ಇದನ್ನು ಹಲವು ಬಾರಿ ಪುನರಾವರ್ತನೆ ಮಾಡಿದರೂ ಸದನದಲ್ಲಿ ಅನಗತ್ಯವಾಗಿ ಎದ್ದು, ಬೇಕಾಬಿಟ್ಟಿ ಮಾತನಾಡುವವರಿಗೆ ಮಾತ್ರ ಛಾಟಿ ಬೀಸದೆ ಇರಲಿಲ್ಲ. ಮಾತನಾಡುವ ವಿಚಾರ ನಿಖರ ಮತ್ತು ಸ್ಪಷ್ಟವಾಗಿರಬೇಕು ಎಂದು ತಾಕೀತು ಮಾಡಿದರು.

ಗುಟ್ಕಾ ನಿಷೇಧದಿಂದ ರೈತರು ಕಂಗಾಲಾಗಿದ್ದಾರೆ ಎಂದು ಜೆಡಿಎಸ್ನ ಬಿ.ಬಿ.ನಿಂಗಯ್ಯ ಹೇಳುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ತಿಮ್ಮಪ್ಪ, `ನೀವು (ಬಿ.ಬಿ.ನಿಂಗಯ್ಯ) ಹಿಂದೆ ತೋಟಗಾರಿಕಾ ಸಚಿವರಾಗಿದ್ದವರು. ನಿಷೇಧದಿಂದ ಬೆಳೆಗಾರರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನು ನೇರವಾಗಿ ಬಿಡಿಸಿ ಹೇಳಿ' ಎಂದು ಸೂಚಿಸಿದರು.

`ನಾನು ಕೇವಲ 40 ದಿನ ಸಚಿವನಾಗಿದ್ದೆ ಅಷ್ಟೆ' ಎಂದು ನಿಂಗಯ್ಯ ಹೇಳಿದರೂ ಸ್ಪೀಕರ್ ಸುಮ್ಮನಾಗಲಿಲ್ಲ. 40 ದಿನವೋ, ಒಂದು ದಿನವೋ ಸಚಿವರಾಗಿದ್ದು ನಿಜ. ಅಡಿಕೆ ಬೆಳೆಗಾರರಿಗೆ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ತಿಳಿಸಿ' ಎಂದು ಖಡಕ್ಕಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.