ಬೆಂಗಳೂರು: ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯನ್ನು ಸರ್ಕಾರ ಪುನರ್ ರಚಿಸಿದೆ. ಇದರಲ್ಲಿ ಹಿರಿಯ ಸಾಹಿತಿ ಯು.ಆರ್. ಅನಂತ ಮೂರ್ತಿ, ಕೆ. ಮರುಳಸಿದ್ಧಪ್ಪ ಸೇರಿ ದಂತೆ ಒಟ್ಟು 11 ಜನ ಸದಸ್ಯರಿದ್ದಾರೆ.

ಪ್ರಶಸ್ತಿಗೆ ಗಣ್ಯರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಸಲಹಾ ಸಮಿತಿ ಯನ್ನು ಸೆಪ್ಟೆಂಬರ್ 20ರಂದೇ ರಚಿಸ ಲಾಗಿತ್ತು. ಇದರಲ್ಲಿ ಹಲವು ಅಕಾಡೆಮಿ ಗಳ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ದ್ದರು. ಆದರೆ ಅವರಿಂದ ಸರ್ಕಾರ ರಾಜೀನಾಮೆ ಪಡೆದಿದ್ದು, ಆ ಹುದ್ದೆಗಳು ಖಾಲಿ ಇವೆ.

ಹೀಗಾಗಿ, ಹೊಸ ಸಮಿತಿಯನ್ನು ರಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯ ದರ್ಶಿ ಸಿದ್ರಾಮಪ್ಪ ತಳವಾರ ತಿಳಿಸಿ ದ್ದಾರೆ. ಹೊಸ ಸಮಿತಿಗೂ ಮುಖ್ಯ ಮಂತ್ರಿಯವರೇ ಅಧ್ಯಕ್ಷರಾಗಿರುತ್ತಾರೆ.

ಸಮಿತಿಯ ಇತರ ಸದಸ್ಯರು: ಜಿ.ವಿ. ಅಂದಾನಿ, ಹಿ.ಶಿ. ರಾಮಚಂದ್ರೇಗೌಡ, ಸುಕನ್ಯಾ ಮಾರುತಿ, ಕೆ.ಬಿ. ಸಿದ್ಧಯ್ಯ, ಕಾ.ತ. ಚಿಕ್ಕಣ್ಣ, ಡಿ.ಕೆ. ಚೌಟ, ರಾಮ ಕೃಷ್ಣ ಮರಾಠೆ, ಸುರೇಶ್ ಹೆಬ್ಳೀಕರ್, ಡಾ. ಬಿಸಲಯ್ಯ.

ಇಂದು ಸಭೆ: ಸಮಿತಿಯು ಗುರುವಾರ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.