ವಿಜಾಪುರ: ಕತೆಗಾರ್ತಿ ಶಾಂತಾದೇವಿ ಕಣವಿ ಸೇರಿದಂತೆ ಆರು ಸಾಧಕಿಯರಿಗೆ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ.

ಮಾಜಿ ಸಚಿವೆ ಮೋಟಮ್ಮ, ಅವಸ್ಥಾ ಜೆನ್ ಸ್ಥಾಪಕ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಬೆಂಗಳೂರಿನ ಡಾ. ವಿಲ್ಲೂ ಮೊರಾವಾಲ ಪಟೇಲ್, ನೃತ್ಯ ಕಲಾವಿದೆ ಬೆಂಗಳೂರಿನ ಲಲಿತಾ ಶ್ರೀನಿವಾಸನ್, ಪರಿಸರವಾದಿ ಹಾವೇರಿಯ ಮಾಧುರಿ ದೇವಧರ, ವಿನೋಬಾ ಭಾವೆ ಅವರ ಅನುಯಾಯಿ, ಮುಧೋಳದ ವಾತ್ಸಲ್ಯ ಧಾಮದ ರೂವಾರಿ ಮೀರಾತಾಯಿ ಕೊಪ್ಪಿಕರ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕುಲಪತಿ ಡಾ,ಮೀನಾ ಚಂದಾವರಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 27 ರಂದು ನಡೆಯುವ 5ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಎಚ್.ಆರ್.ಭಾರದ್ವಾಜ್, ಉನ್ನತ ಶಿಕ್ಷಣ ಖಾತೆ ಸಚಿವ ಆರ್.ವಿ. ದೇಶಪಾಂಡೆ ಭಾಗವಹಿಸಲಿದ್ದಾರೆ.

ಡಾ. ವಿಲ್ಲೂ ಪಟೇಲ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. 32 ವಿದ್ಯಾರ್ಥಿನಿಯರಿಗೆ 40 ಚಿನ್ನದ ಪದಕ ಹಾಗೂ 7,035 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗುವದು ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.