ನವದೆಹಲಿ: ಭಾರತದ ಮಕ್ಕಳಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಲ್ಲಿನ ಪ್ರತಿ ಐದು ಮಕ್ಕಳಲ್ಲಿ ಒಂದು ಮಗು ಬೊಜ್ಜು ದೇಹವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಈ ಮಕ್ಕಳು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿಯೊಂದು ಹೇಳಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪಾಪ್ಯುಲೇಷನ್ ರೆಫರೆನ್ಸ್ ಬ್ಯೂರೊ (ಪಿಆರ್‌ಬಿ)ದ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.

ಎಳೆಮಕ್ಕಳ ಬೊಜ್ಜಿಗೆ ಅನಾರೋಗ್ಯಕರ ಆಹಾರ ಶೈಲಿ ಮತ್ತು ಕಡಿಮೆ ದೈಹಿಕ ಚಟುವಟಿಕೆ ಕಾರಣ ಎಂದೂ ವರದಿ ಹೇಳಿದೆ. ‘ಶೇ 25ರಷ್ಟು ಮಕ್ಕಳು ಪ್ರತಿ ದಿನ ಮೂರು ತಾಸಿಗೂ ಹೆಚ್ಚು ಟಿ.ವಿ ಮತ್ತು ಕಂಪ್ಯೂಟರ್ ಮುಂದೆ ಕಳೆಯುತ್ತಾರೆ’ ಎಂದು ದೆಹಲಿಯ ಏಮ್ಸ್‌ನ ಸಮುದಾಯ ಆರೋಗ್ಯ ವಿಭಾಗದ ಪ್ರೊ. ಆನಂದ ಕೃಷ್ಣನ್ ಹೇಳುತ್ತಾರೆ.

ಬೊಜ್ಜಿನಿಂದಾಗಿ ಮಕ್ಕಳಿಗೆ ಸಕ್ಕರೆ ಕಾಯಿಲೆ (ವಿಧ–2), ಹೃದಯ ಕಾಯಿಲೆಗಳು, ಲಕ್ವ, ಕೆಲವು ವಿಧದ ಕ್ಯಾನ್ಸರ್ ಕಾಯಿಲೆ ಬರುವ ಅಪಾಯ ಹೆಚ್ಚು. ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆ ರೋಗಗಳು ಹೆಚ್ಚಲು ಕಾರಣ.ಬೊಜ್ಜಿನ ಸಮಸ್ಯೆ ಹೆಚ್ಚುವಲ್ಲಿ ಆಹಾರ ಉದ್ಯಮದ ಪಾಲೂ ಇದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಇರುವ ಹದಿಹರೆಯದವರ ಸಂಖ್ಯೆ 24.3 ಕೋಟಿ. ಅಂದರೆ ಜಗತ್ತಿನ ಒಟ್ಟು ಹದಿಹರೆಯದವರಲ್ಲಿ ಶೇ 25ರಷ್ಟು ಭಾಗ ಮಕ್ಕಳು ಭಾರತದಲ್ಲಿಯೇ ಇದ್ದಾರೆ. ಹಾಗಾಗಿ ಮಕ್ಕಳಲ್ಲಿನ ಬೊಜ್ಜು ಸಮಸ್ಯೆ ಪರಿಹಾರಕ್ಕಾಗಿಯೇ ವಿಶೇಷ ಯೋಜನೆ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.