* ಆಗ ಎಸೆಯಲ್ಪಟ್ಟು ಈಗ ಬಡತನ, ಅವಮಾನಗಳಿಂದ ಜರ್ಝರಿತವಾಗಿರುವ ಸಮುದಾಯದ ಹಿಂದಿನ ಚರಿತ್ರೆಯ ಘನತೆ ಕಾಣಿಸುತ್ತಿತ್ತು. ಅಸ್ಪೃಶ್ಯತೆಯ ತಾರತಮ್ಯಕ್ಕೆ ಒಳಗಾದವರು ಆ ನೋವನ್ನು `ಬದುಕುವ ರೀತಿ ಎಂದುಕೊಂಡರೆ ಅದು ಸ್ಥೂಲವಾಗಿ ದೈಹಿಕವಾಗಿರುತ್ತದೆ. ಅದೇ ಆ ನೋವು ತಾರತಮ್ಯಗಳು `ಗಾಯ ಎಂದು ಅರಿವಿಗೆ ಬಂದರೆ ಅವು ಸೂಕ್ಷ್ಮವಾಗಿ ಮನೋಮಯವಾಗಿ ಕ್ಷಣಕ್ಷಣವೂ ಹಿಂಸಿಸುತ್ತವೆ. - ಹೀಗೆ ತಮ್ಮದೇ ಆದ ನುಡಿಗಳಲ್ಲಿ 2012ರಲ್ಲಿ ‘ಪ್ರಜಾವಾಣಿ’ ಹೊರತಂದ `ದಲಿತ ವಿಶೇಷ ಸಂಚಿಕೆ’ಯಲ್ಲಿ ದೇವನೂರ ಮಹಾದೇವ ಅವರು ಬೆಳಕು ಚೆಲ್ಲಿದ್ದಾರೆ. ಈ ಸಂಚಿಕೆಯಲ್ಲಿ ಪ್ರಕಟವಾದ ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ..., ಸಂಪಾದಕರ ಮಾತು: ಕಾಳಜಿಗಳ ಮರುಶೋಧ ಹಾಗೂ ಸಾಮಾಜಿಕ ನ್ಯಾಯ ಮರೀಚಿಕೆ, ಆಂಜನಪ್ಪಗೆ ಸಂಕಷ್ಟಗಳೇ ಸಂಗಾತಿ ನಾಲ್ಕು ವಿಶೇಷ ಲೇಖನಗಳನ್ನು ನಿಮಗೆ ಮತ್ತೆ ನೀಡುವ ಪ್ರಯತ್ನ ಇದು.

ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ...

* ಎಂದಿನಂತೆ ದೇವನೂರರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದರೂ ಪತ್ರಿಕೆಯ ಉದ್ದೇಶವನ್ನು ಮನಗಂಡು ಅತಿಥಿ ಸಂಪಾದಕರಾಗಲು ಮುಜುಗರದಿಂದಲೇ ಒಪ್ಪಿಕೊಂಡರು. ಕಡಿಮೆ ಕಾಲಾವಕಾಶದಲ್ಲೇ, ಜ್ವರವೇರಿಸಿಕೊಂಡ ಉತ್ಸಾಹದಲ್ಲಿ ಅವರು ಕಾರ್ಯ ತತ್ಪರವಾದುದರ ಫಲವಾಗಿ ಈ ಸಂಚಿಕೆ ಹೊರ ತರಲಾಯಿತು.

ದಲಿತರ ಬದುಕಿಗೆ ಸಂಬಂಧಿಸಿದ ಅನೇಕ ಮುಖಗಳನ್ನು ಒಳಗೊಳ್ಳುವಂತೆ ಈ ಸಂಚಿಕೆಯನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಪ್ರಮುಖ ದಲಿತ ಚಿಂತಕರು, ಬರಹಗಾರರು, ಕಲಾವಿದರು ನಮ್ಮ ಪ್ರಯತ್ನದಲ್ಲಿ ಜೊತೆಯಾಗಿದ್ದಾರೆ. ಇದು ದಲಿತ ದನಿಯ ವಿಶೇಷ ಸಂಚಿಕೆಯಾದರೂ, ಆಂತರ್ಯದಲ್ಲಿ ಇದು ಸೂಸುವುದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ ದನಿಯನ್ನೇ ಎನ್ನುವುದು ನಮ್ಮ ಗಮನದಲ್ಲಿದೆ. – ಕೆ.ಎನ್. ಶಾಂತಕುಮಾರ್, ಸಂಪಾದಕರು, ‘ಪ್ರಜಾವಾಣಿ’

ಸಂಪಾದಕರ ಮಾತು: ಕಾಳಜಿಗಳ ಮರುಶೋಧ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಬಜೆಟ್‌ನಲ್ಲೂ ಸಾಮಾಜಿಕ ನ್ಯಾಯ ಒದಗಿಸುವ ಉಪ ಯೋಜನೆಗಳು ಜಾರಿಗೆ ಬಂದು ಎರಡು ದಶಕ ಕಳೆದಿದೆ. ರಾಜ್ಯ ಬಜೆಟ್ ಮೂಲಕವೇ ಹತ್ತಾರು ಸಾವಿರ ಕೋಟಿ ರೂಪಾಯಿ ಈ ಉಪ ಯೋಜನೆಗಳ ಅಡಿಯಲ್ಲಿ ಹರಿದುಹೋಗಿದೆ. ಇದು ದಲಿತರ ಬದುಕಿನಲ್ಲಿ ಬೆಳಕು ಮೂಡಿಸಿದೆಯೇ ಎಂದು ಹುಡುಕ ಹೊರಟರೆ `ಸಂಭ್ರಮದ ಸುಳಿವೇ ಸಿಗುವುದಿಲ್ಲ ಎಂಬ ಸಂಗತಿಗಳನ್ನು ಬೆನ್ನುಹತ್ತಿ ನೋಡುವ ಯತ್ನವನ್ನು ವಿ.ಎಸ್. ಸುಬ್ರಹ್ಮಣ್ಯ ಅವರು ಮಾಡಿದ್ದರು.

ಸಾಮಾಜಿಕ ನ್ಯಾಯ ಮರೀಚಿಕೆ

* ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗವಿಕುಂಟಹಳ್ಳಿ ಎಂಬ ಕುಗ್ರಾಮದ ಆಂಜನಪ್ಪ ಅವರು ಮುಖವೀಣೆ ನುಡಿಸುವುದರಲ್ಲಿ ನಿಷ್ಣಾತರು. ದಲಿತ ಸಮುದಾಯದ ಆದಿಕರ್ನಾಟಕ ಜನಾಂಗಕ್ಕೆ ಸೇರಿದ ಅವರು ಮುಖವೀಣೆ ನುಡಿಸುವುದನ್ನೇ ಜೀವನಕ್ಕೆ ಆಧಾರವಾಗಿಸಿಕೊಂಡಿದ್ದರು. ಕಲಾವಿದರೊಬ್ಬರ ಕುರಿತು ರಾಹುಲ ಬೆಳಗಲಿ ಅವರು ಆಂಜನಪ್ಪ ಅವರ ಬದುಕಿನ ಚಿತ್ರಣ ಕಟ್ಟಿಕೊಟ್ಟಿದ್ದರು.

ಆಂಜನಪ್ಪಗೆ ಸಂಕಷ್ಟಗಳೇ ಸಂಗಾತಿ

* ಜಾತ್ ಪಾತ್ ತೋಡಕ್ ಮಂಡಲ್ (ಜಾತಿ ಗೀತಿ ನಾಶ ಮಂಡಳಿ) ಲಾಹೋರಿನ ಸಭೆಯನ್ನು ರದ್ದುಪಡಿಸದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾಷಣ ಮಾಡಲು ಅವಕಾಶ ಕೊಡಬೇಕಿತ್ತು. ದೇಶದಲ್ಲಿ ಜಾತಿ ವಿನಾಶಕ್ಕೆ ಅದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗುತ್ತಿತ್ತು’

‘ಮಹಾತ್ಮ ಗಾಂಧಿ ಮತ್ತು ಡಾ.ಅಂಬೇಡ್ಕರ್ ಅವರ ನಡುವಿನ ವೈಚಾರಿಕ ಸಂಘರ್ಷ ಅದೆಂಥ ದಿವ್ಯ ಬೆಳಕನ್ನು ಉಳಿಸಿಹೋಗಿದೆ ಅಲ್ಲವೆ?’

–ಹೀಗೆ ರಾಯಚೂರಿನ ಮಸ್ಕಿ, ಹಾಸನ ಜಿಲ್ಲೆಯ ಹೊಳೆನರಸೀಪುರ, ಬೆಳಗಾವಿ ಜಿಲ್ಲೆಯ ಅಥಣಿ ಸೇರಿದಂತೆ ರಾಜ್ಯದ ಹಲವು ಊರುಗಳ ಕಾಲೇಜು ಕ್ಯಾಂಪಸ್ಸುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ನಡೆದ ಚರ್ಚೆಯ ಒಂದು ಝಲಕ್ ಇದು. ಲಾಹೋರ್ ಸಭೆಗಾಗಿ ಡಾ. ಅಂಬೇಡ್ಕರ್ ಸಿದ್ಧಪಡಿಸಿದ್ದ ಭಾಷಣದ ಸುದೀರ್ಘ ಟಿಪ್ಪಣಿ ಸಾವಿರಾರು ವಿದ್ಯಾರ್ಥಿಗಳ ಎದೆಯೊಳಗಿನ ಹಾಡಾಗಿಬಿಟ್ಟಿತ್ತು. ಈ ಕುರಿತು ‘ಪ್ರಜಾವಾಣಿ’ ‘ಕರ್ನಾಟಕ ದರ್ಶನ’ದಲ್ಲಿ ವಿಧ್ಯಾರ್ಥಿಗಳ ಭಾವಕ್ಕೆ ಧ್ವನಿಯಾಗಿತ್ತು.

ಅಂಬೇಡ್ಕರ್ ‘ಮರುಹುಟ್ಟು’!

* 1956ರ ಡಿ. 6ರಂದು ದೆಹಲಿಯಲ್ಲಿ ಅಂಬೇಡ್ಕರ್ ಮೃತಪಟ್ಟರು. ಇಡೀ ದಿನ ಜನರು ಅಂತಿಮ ದರ್ಶನ ಪಡೆದರು. ಅಂಬೇಡ್ಕರ್ ಅವರು ಸಂವಿಧಾನದ ಶಿಲ್ಪಿ ಎಂದು ಅವರ ಗೌರವಾರ್ಥ ಸಂಸತ್ ಕಲಾಪ ಮುಂದೂಡಿಕೆಗೆ ಮುನ್ನ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದರು. ಸಂವಿಧಾನವನ್ನು ರೂಪಿಸಲು ಅಂಬೇಡ್ಕರ್ ಅವರಷ್ಟು ಕಾಳಜಿ ಮತ್ತು ತೊಂದರೆಯನ್ನು ಬೇರೆ ಯಾರೂ ತೆಗೆದುಕೊಂಡಿಲ್ಲ ಎಂದು ನೆಹರೂ ಬಣ್ಣಿಸಿದರು. ಅಂಬೇಡ್ಕರ್ ಅವರ ಇನ್ನೊಂದು ಅತ್ಯಂತ ದೊಡ್ಡ ಆಸಕ್ತಿಯಾಗಿದ್ದ ಹಿಂದೂ ವೈಯಕ್ತಿಕ ಕಾನೂನುಗಳ ಸುಧಾರಣೆ ಬಗ್ಗೆ ಮಾತನಾಡಿದ ನೆಹರೂ, ಈ ನಿಟ್ಟಿನಲ್ಲಿ ಸುಧಾರಣೆಗಳು ನಡೆದಿರುವುದು ಅವರ ಸಂತಸಕ್ಕೆ ಕಾರಣವಾಗಿತ್ತು ಎಂಬಿತ್ಯಾದಿ ವಿಷಯಗಳ ಕುರಿತು ರಾಮಚಂದ್ರ ಗುಹಾ ಅವರು ತಮ್ಮ ಗುಹಾಂಕಣದಲ್ಲಿ ಪ್ರಸ್ತಾಪಿಸಿದ್ದಾರೆ.

ಅಂಬೇಡ್ಕರ್ ನೆನಪು: ಅಂದು ಮತ್ತು ಇಂದು

ಗಾಂಧಿ, ಅಂಬೇಡ್ಕರ್ ಚಿಂತನೆಗಳ ಮರು ವ್ಯಾಖ್ಯಾನ

* ಏಪ್ರಿಲ್ 14 ಬಂತೆಂದರೆ ದಲಿತರು ಹೊಸ ವರ್ಷದ ರೀತಿ ಸಂಭ್ರಮಿಸುತ್ತಿದ್ದರು. ಈ ಸಂಭ್ರಮದಲ್ಲೇ ಜಯಂತಿ ಸಾಗಿತ್ತು. ಊರೂರು ಕೇರಿಕೇರಿಗಳಲ್ಲಿ ಅಂಬೇಡ್ಕರ್ ಅವರನ್ನು ಪರಿಚಯಿಸುವ ಧ್ಯೇಯದೊಂದಿಗೆ ದಲಿತ ಸಂಘರ್ಷ ಸಮಿತಿ ಇದಕ್ಕಾಗಿ ಶ್ರಮಿಸುತ್ತಿತ್ತು. 90ರ ದಶಕದಿಂದೀಚೆಗೆ ಸರ್ಕಾರಗಳು ಅಂಬೇಡ್ಕರ್ ಜಯಂತಿಯನ್ನು ಗುತ್ತಿಗೆ ತೆಗೆದುಕೊಂಡವು ಎಂಬ ಅಂಶ ಸೇರಿದಂತೆ ಪ್ರಸ್ತುತ ಕಾಲಘಟ್ಟದಲ್ಲಿನ ಆಗುಹೋಗುಗಳ ಬಗ್ಗೆ ಡಾ.ಎಚ್.ಡಿ. ಉಮಾಶಂಕರ್ ಅವರು ಪ್ರಸ್ತಾಪಿಸಿದ್ದರು.

ಅಂಬೇಡ್ಕರ್ ಆಶಯಗಳ ಪ್ರಸ್ತುತತೆ

ಅಂಬೇಡ್ಕರ್ ಅವರ ಕುರಿತು ವಿಭಿನ್ನ ಆಯಾಮಗಳ ನೋಟದ ಲೇಖನಗಳು ಇಲ್ಲಿವೆ. ಇವನ್ನೊಮ್ಮೆ ಓದಿ...

* ಚಿತ್ರಪಟಗಳಿಂದ ಚಿತ್ತಭಿತ್ತಿಯತ್ತ ದಲಿತ ಚಳವಳಿಯ ನಾಳೆಗಳು

* ಮಾಸದ ಮಾತುಕತೆ; ‘ಸರ್ವೋದಯ’ದ ನಡಿಗೆಯಲ್ಲಿ ತಿಟ್ಹತ್ತಿ ನಿಂತು...

* ಹೊಸ ಕನ್ನಡಿಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್

* ಸಂವಿಧಾನದ ಕರಡನ್ನು ಅಂಬೇಡ್ಕರ್ ತಯಾರಿಸಲಿಲ್ಲವೇ?

* ಬಾಲಿವುಡ್ಗೆ ಬೇಡವಾದ ಅಂಬೇಡ್ಕರ್

* ಗೀತೆ-ಗಾಂಧಿ-ಅಂಬೇಡ್ಕರ್

ಇವನ್ನೂ ಓದಿ...

1) ‘ಚೇತನ ಚಿಲುಮೆ’ಯಾಗಿ ಕಂಡ ಅಂಬೇಡ್ಕರ್...

2) ‘ಭಾವದ ಬೆಳಕಾಗಿ’ ಕಂಡ ಅಂಬೇಡ್ಕರ್...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.