ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ | ಕಲ್ಲಿದ್ದಲು ಗಣಿಯಲ್ಲಿ ಅವಘಡ: 10 ಮಂದಿ ಸಾವು

Published 13 ಜನವರಿ 2024, 13:06 IST
Last Updated 13 ಜನವರಿ 2024, 13:06 IST
ಅಕ್ಷರ ಗಾತ್ರ

ಬೀಜಿಂಗ್‌: ಕೇಂದ್ರ ಚೀನಾದ ಹೆನನ್‌ ಪ್ರಾಂತ್ಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅವಘಡದಲ್ಲಿ ಹತ್ತು ಮಂದಿ ಮೃತಪಟ್ಟಿದ್ದು, ಆರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದರು.

ಪಿಂಗ್ದಿಂಶ್ಯಾನ್‌ ಟಿಯನಾನ್‌ ಕೋಲ್‌ ಮೈನಿಂಗ್‌ ಕೊ. ಲಿಮಿಟೆಡ್‌ನ ಗಣಿಯಲ್ಲಿ ಶುಕ್ರವಾರ ರಾತ್ರಿ 2.55ರ ಸುಮಾರಿಗೆ ಕಲ್ಲಿದ್ದಲು ಮತ್ತು ಅನಿಲ ಸ್ಫೋಟಗೊಂಡು ದುರಂತ ಸಂಭವಿಸಿರುವ ಸಾಧ್ಯತೆ ಇದೆ. ಈ ವೇಳೆ 425 ಮಂದಿ ನೆಲದಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ 380 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸರ್ಕಾರಿ ಒಡೆತನದ ಸಿಸಿಟಿವಿ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT