ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಪ್ರಪಾತಕ್ಕೆ ಉರುಳಿದ ಬಸ್: 17 ಯಾತ್ರಿಕರು ಸಾವು

Published 11 ಏಪ್ರಿಲ್ 2024, 12:26 IST
Last Updated 11 ಏಪ್ರಿಲ್ 2024, 12:26 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಸಿಂಧ್‌ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಗಡಿ ಪಟ್ಟಣದ ಬಳಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ಪ್ರಪಾತಕ್ಕೆ ಬಿದ್ದು ಕನಿಷ್ಠ 17 ಜನರು ಮೃತಪಟ್ಟು, 38 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯಲ್ಲಿರುವ ಮುಸ್ಲಿಂ ಸೂಫಿ ಸಂತ ಶಾ ನೂರಾನಿ ದೇಗುಲಕ್ಕೆ ಯಾತ್ರಾರ್ಥಿಗಳು ತೆರಳುತ್ತಿದ್ದಾಗ, ಹಬ್ ಪಟ್ಟಣದ ಬಳಿಯಿರುವ ಪ್ರಪಾತಕ್ಕೆ ಬಸ್ ಬಿದ್ದಿದೆ. ಅಪಘಾತ ಸಂಭವಿಸಿದ ಸ್ಥಳ ಕರಾಚಿಯಿಂದ 100 ಕಿ.ಮೀ. ದೂರದಲ್ಲಿದೆ.

‘ಬಸ್‌ನಲ್ಲಿದ್ದ ಯಾತ್ರಿಗಳು ಸಿಂಧ್ ಪ್ರಾಂತ್ಯದ ತಟ್ಟಾ ಪಟ್ಟಣಕ್ಕೆ ಸೇರಿದವರು. ಈದ್ ದಿನದಂದು (ಬುಧವಾರ) ಮಧ್ಯಾಹ್ನ 2 ಗಂಟೆಗೆ ಯಾತ್ರೆಗೆ ಹೊರಟಿದ್ದರು. ರಾತ್ರಿ 8 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಕಂದಕಕ್ಕೆ ಬಿದ್ದಿದೆ’ ಎಂದು ಪಾಕ್‌ ಸಚಿವ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.

‘ಗಾಯಗೊಂಡವರು ಮತ್ತು ಮೃತಪಟ್ಟವರನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳ ಗುರುತು ಪತ್ತೆಯಾಗಿದೆ. ಬಹುತೇಕರು ಒಂದೇ ಕುಟುಂಬಕ್ಕೆ ಸೇರಿದವರು’ ಎಂದು ಹಬ್ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT