ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ ಗೀವಿಂಗ್‌ ಡೇ’: ₹10 ಕೋಟಿ ಸಂಗ್ರಹ

Last Updated 7 ಮಾರ್ಚ್ 2023, 13:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ‘ಇಂಡಿಯಾ ಫಿಲಾಂಥ್ರಪಿ ಅಲಯನ್ಸ್‌ ಸಂಸ್ಥೆ ಹಮ್ಮಿಕೊಂಡಿದ್ದ ‘ಇಂಡಿಯಾ ಗೀವಿಂಗ್‌ ಡೇ’ (ಭಾರತಕ್ಕೆ ಉಡುಗೊರೆ ನೀಡುವ ದಿನ) ಎಂಬ ಅಭಿಯಾನದಲ್ಲಿ ₹10 ಕೋಟಿ ಹಣ ಸಂಗ್ರಹವಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಅಲೆಕ್ಸ್‌ ಕೌನ್ಟ್ಸ್‌ ಅವರು ಸೋಮವಾರ ಹೇಳಿದ್ದಾರೆ.

‘ಭಾರತದಲ್ಲಿ ಸಾಮಾಜಿಕ ಅಭಿವೃದ್ಧಿಗಾಗಿ ಕೆಲಸ ಮಾಡುವ ಅಮೆರಿಕ ಮೂಲದ 25 ಎನ್‌ಜಿಒಗಳಿಗೆ ಹಣ ನೀಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್‌ 2ರಂದು ಈ ಅಭಿಯಾನ ನಡೆದಿತ್ತು. ಸುಮಾರು ಒಂದು ಸಾವಿರ ಮಂದಿ ದೇಣಿಗೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಅಭಿಯಾನದಲ್ಲೇ ಇಷ್ಟೊಂದು ಯಶಸ್ಸು ಸಿಕ್ಕಿದ್ದು ಸಂತಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT