ಕೋಲ್ಕತ್ತ: ಅನುಭವಿ ಲೆಗ್ ಸ್ಪಿನ್ನರ್ ಅದಿಲ್ ರಶೀದ್ ಅವರ ಕೈಚಳಕ ಮತ್ತು ಟಾಮ್ ಬ್ಯಾಂಟನ್ ಅವರ ಅಜೇಯ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಂಟ್ಲೆಂಡ್ ವಿರುದ್ಧ ಐದು ವಿಕೆಟ್ಗಳ ಸುಲಭ ಜಯ ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ರಶೀದ್ (36ಕ್ಕೆ 3) ಅವರ ಸಾಹಸದಿಂದ ಸ್ಕಾಟ್ಲೆಂಡ್ ಅನ್ನು 19.2 ಓವರ್ಗಳಲ್ಲಿ 152 ರನ್ಗಳಿಗೆ ಕಟ್ಟಿಹಾಕಿತು. ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಬ್ಯಾಂಟನ್ (ಔಟಾಗದೇ 63;41ಎ) ಅವರ ಬ್ಯಾಟಿಂಗ್ ನೆರವಿನಿಂದ ಇನ್ನೂ 10 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ಗೆ 155 ರನ್ ಗಳಿಸಿ ಸಂಭ್ರಮಿಸಿತು.

ತನ್ನ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದ ಆಂಗ್ಲರ ಪಡೆ ಗೆಲುವಿನ ಹಳಿಗೆ ಮರಳಿತು. ಇದರೊಂದಿಗೆ ಪ್ಲೇ ಆಫ್ ಕನಸನ್ನೂ ಜೀವಂತವಾಗಿರಿಸಿಕೊಂಡಿತು.

ಸ್ಕಾಂಟ್ಲೆಂಡ್ ತಂಡಕ್ಕೆ ವೇಗಿ ಜೋಫ್ರಾ ಆರ್ಚರ್ ಆರಂಭದಲ್ಲೇ ಪೆಟ್ಟು ನೀಡಿದರು. ತಂಡವು 18 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಜಾರ್ಜ್ ಮುನ್ಸೆ (4) ಮತ್ತು ಬ್ರಾಂಡನ್ ಮೆಕ್ಮುಲ್ಲೆನ್ (0) ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಆದರೆ, ಮೈಕೆಲ್ ಜೋನ್ಸ್ (33;20ಎ) ಮತ್ತು ನಾಯಕ ರಿಚಿ ಬ್ಯಾರಿಂಗ್ಟನ್ (49;32ಎ) ಅವರು ಮೂರನೇ ವಿಕೆಟ್ಗೆ 71 ರನ್ ಸೇರಿಸಿ ಕೊಂಚ ಪ್ರತಿರೋಧ ತೋರಿದರು. ಆಲಿವರ್ ಡೇವಿಡ್ಸನ್ (ಔಟಾಗದೇ 20) ತಂಡದ ಮೊತ್ತ 150 ದಾಟಿಸಲು ನೆರವಾದರು.

ಇಂಗ್ಲೆಂಡ್ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಕ್ರಮವಾಗಿ ಮೊದಲೆರಡು ಓವರ್ಗಳಲ್ಲಿ ಫಿಲ್ ಸಾಲ್ಟ್ (2) ಮತ್ತು ಜೋಸ್ ಬಟ್ಲರ್ (3) ವಿಕೆಟ್ ಒಪ್ಪಿಸಿದರು. ಜೇಕಬ್ ಬೇಥೆಲ್ (32;28) ಮತ್ತು ಬ್ಯಾಂಟನ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಜೇಕಬ್ ನಿರ್ಗಮನದ ಬಳಿಕ ಬಂದ ನಾಯಕ ಹ್ಯಾರಿ ಬ್ರೂಕ್ (4) ನಿರಾಸೆ ಮೂಡಿಸಿದರು. ನಂತರದಲ್ಲಿ ಸ್ಯಾಮ್ ಕರನ್ (28;20ಎ) ಮತ್ತು ವಿಲ್ ಜ್ಯಾಕ್ಸ್ (ಔಟಾಗದೇ 16) ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು:

ಸ್ಕಾಂಟ್ಲೆಂಡ್: 19.4 ಓವರ್ಗಳಲ್ಲಿ 152 (ಮೈಕೆಲ್ ಜೋನ್ಸ್ 33, ರಿಚಿ ಬ್ಯಾರಿಂಗ್ಟನ್ 49; ಅದಿಲ್ ರಶೀದ್ 36ಕ್ಕೆ 3, ಜೋಫ್ರಾ ಆರ್ಚರ್ 24ಕ್ಕೆ 2, ಲಿಯಾಮ್ ದಾಸನ್ 34ಕ್ಕೆ 2)

ಇಂಗ್ಲೆಂಡ್: 18.2 ಓವರ್ಗಳಲ್ಲಿ 155 (ಟಾಮ್ ಬ್ಯಾಂಟನ್ ಔಟಾಗದೇ 63, ಜೇಕಬ್ ಬೇಥೆಲ್ 32).

ಪಂದ್ಯದ ಆಟಗಾರ: ಟಾಮ್ ಬ್ಯಾಂಟನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.