ಕರಾಚಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ನ ಲೀಗ್ ಹಂತದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ಜರ್ಸಿಗೆ ಭಾರಿ ಬೇಡಿಕೆ ಬಂದಿದೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವು ಭಾನುವಾರ(ಫೆ.15) ಕೊಲಂಬೊದಲ್ಲಿ ಜರುಗಲಿದೆ. ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದ ಪಾಕಿಸ್ತಾನವು, ಐಸಿಸಿ ಸಭೆ ಬಳಿಕ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸಿತ್ತು.

ಪಂದ್ಯಕ್ಕೂ ಮುನ್ನ ದಿನ ಕರಾಚಿ ಸೇರಿದಂತೆ ಹಲವು ಕಡೆಗಳಲ್ಲಿ ಕ್ರಿಕೆಟ್ ಅಭಿಮಾನಿಗಳು, ಪಾಕ್ ತಂಡದ ಜರ್ಸಿ, ಕ್ಯಾಪ್ ಹಾಗೂ ಕೈಗವಸುಗಳನ್ನು ಕೊಂಡುಕೊಳ್ಳಲು ಮುಂದಾಗಿದ್ದಾರೆ. ಭಾರಿ ಬೇಡಿಕೆ ಬಂದಿದ್ದು, ಈ ಸಂಖ್ಯೆಯ ವ್ಯಾಪಾರವನ್ನು ಯಾವತ್ತೂ ನಾವು ನೋಡಿರಲಿಲ್ಲ ಎಂದು ಪಾಕಿಸ್ತಾನದ ವ್ಯಾಪಾರಿಗಳು ತಿಳಿಸಿದ್ದಾರೆ.

ಪಿಸಿಬಿಯ ಅಧಿಕೃತ ಜರ್ಸಿಯು ಆನ್ಲೈನ್ನಲ್ಲಿ ಮಾತ್ರ ಲಭ್ಯವಿದೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ದುಬೈ ಸೇರಿದಂತೆ ಪಾಕಿಸ್ತಾನ ನಾಗರಿಕರು ಅಧಿಕ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಕೂಡ ತಂಡದ ಜೆರ್ಸಿಗೆ ಹೆಚ್ಚು ಬೇಡಿಕೆಯಿದೆ ಎಂದು ವರದಿಯಾಗಿದೆ.

ಲೀಗ್ ಹಂತದಲ್ಲಿ ಎ ಗುಂಪಿನಲ್ಲಿ ಸ್ಥಾನಪಡೆದಿರುವ ಎರಡೂ ದೇಶಗಳು ಕೂಡ 2 ಪಂದ್ಯಗಳ ಗೆಲುವಿನೊಂದಿಗೆ 4 ಪಾಯಿಂಟ್ಗಳನ್ನು ಹೊಂದಿವೆ. ನಾಳೆ ಗೆಲ್ಲುವ ತಂಡ ಎ ಗುಂಪಿನಿಂದ ಸೂಪರ್ 8ಕ್ಕೆ ಲಗ್ಗೆ ಇಡಲಿರುವ ಮೊದಲ ತಂಡವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.