ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ- ಆನೆ ಸಂಘರ್ಷ: ಶ್ರೀಲಂಕಾದಲ್ಲಿ 239 ಆನೆಗಳ ಹತ್ಯೆ

Published 19 ಜುಲೈ 2023, 22:30 IST
Last Updated 19 ಜುಲೈ 2023, 22:30 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದಲ್ಲಿ ಈ ವರ್ಷದ ಜುಲೈ 14 ರವರೆಗೆ 239 ಆನೆಗಳ ಹತ್ಯೆ ನಡೆದಿದೆ. ಪ್ರತಿ ದಿನ ಸರಾಸರಿ ಒಂದಕ್ಕಿಂತಲೂ ಹೆಚ್ಚು ಆನೆಗಳು ಬಲಿಯಾಗಿವೆ ಎಂದು ಸರ್ಕಾರದ ಹೊಸ ಮಾಹಿತಿಯೊಂದು ಹೇಳಿದೆ. ಈ ಮಾಹಿತಿ ಪ್ರಕಾರ, ದ್ವೀಪ ರಾಷ್ಟ್ರದಲ್ಲಿ ಮಾನವ- ಆನೆ ಸಂಘರ್ಷದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.

ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 74 ಆನೆಗಳು ಪತ್ತೆಯಾಗದ ಕಾರಣಗಳಿಂದ ಸಾವನ್ನಪ್ಪಿವೆ. 49 ಆನೆಗಳು ಗುಂಡೇಟಿಗೆ ಬಲಿಯಾಗಿವೆ. 36 ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿವೆ ಎಂದು ಎಕಾನಮಿ ನೆಕ್ಸ್ಟ್ ನ್ಯೂಸ್ ಪೋರ್ಟಲ್ ಬುಧವಾರ ವರದಿ ಮಾಡಿದೆ.

ಅನುರಾಧಪುರ ಜಿಲ್ಲೆಯೊಂದರಲ್ಲೇ 47 ಆನೆಗಳು ಮತ್ತು ಇದರ ನೆರೆಯ ಜಿಲ್ಲೆ ಪೊಲ್ಲನ್ನರುವಾದಲ್ಲಿ 46 ಆನೆಗಳು ಬಲಿಯಾಗಿವೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT