ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಿನದಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 140 ವರ್ಷದಲ್ಲೇ ಅಧಿಕ ಮಳೆ!

744.8 ಮಿಲಿಮೀಟರ್‌ನಷ್ಟು ಮಳೆ
Published 2 ಆಗಸ್ಟ್ 2023, 12:56 IST
Last Updated 2 ಆಗಸ್ಟ್ 2023, 12:56 IST
ಅಕ್ಷರ ಗಾತ್ರ

ಝುಝೌ (ಚೀನಾ): ‘ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಶನಿವಾರದಿಂದ ಇಲ್ಲಿಯವರೆಗೆ 744.8 ಮಿಲಿಮೀಟರ್‌ನಷ್ಟು (29.3 ಇಂಚು) ಮಳೆಯಾಗಿದ್ದು, ಇದು 140 ವರ್ಷದಲ್ಲೇ ಅಧಿಕವಾಗಿದೆ’ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.

‘ಡೊಕ್ಸುರಿ ಚಂಡಮಾರುತವು ದಕ್ಷಿಣ ಚೀನಾ ಪ್ರಾಂತ್ಯದಿಂದ ಉತ್ತರ ಚೀನಾದ ಕಡೆಗೆ ಚಲಿಸಿದ ಪರಿಣಾಮ ಬೀಜಿಂಗ್‌ ಹಾಗೂ ಹೆಬೈ ಸುತ್ತಮುತ್ತ ದಾಖಲೆ ಪ್ರಮಾಣದ ಮಳೆಯಾಗಿದೆ. ಪ್ರವಾಹದಿಂದ ವಿದ್ಯುತ್‌ ಅಭಾವ ಸೃಷ್ಟಿಯಾಗಿದ್ದು, ಕುಡಿಯುವ ನೀರನ್ನು ಪೂರೈಸುವ ಪೈಪ್‌ಗಳಿಗೂ ಹಾನಿಯಾಗಿದೆ’ ಎಂದು ಹೇಳಿದೆ.

ಪ್ರವಾಹದಿಂದಾಗಿ ಹೆಬೈ ಪ್ರಾಂತ್ಯದ ಝುಝೌನಲ್ಲಿ ಭಾರಿ ಹಾನಿ ಸಂಭವಿಸಿದೆ. ‘ಈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಲೈಟ್‌ಗಳ ನೆರವನ್ನು ನೀಡಿ’ ಎಂದು ಪೊಲೀಸರು ಮಂಗಳವಾರ ರಾತ್ರಿ ಮನವಿ ಮಾಡಿದ್ದರು.

ಝುಝೌ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಮಾಹಿತಿ ಇದುವರೆಗೂ ತಿಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT