ಬೈರೂತ್: ಬೈರೂತ್ ಸೇರಿದಂತೆ ಲೆಬನಾನ್‌ನ ಹಲವೆಡೆ ಪೇಜರ್, ವಾಕಿ ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ ಸಂಭವಿಸಿದ್ದು, 32 ಮಂದಿ ಮೃತಪಟ್ಟಿದ್ದು 3,250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಗೊಂಡಿರುವ ಜನರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರದ ಪೇಜರ್ ಬಾಂಬ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಹೊಸ ಸ್ಫೋಟಗಳು ಜನರನ್ನು ಮತ್ತಷ್ಟು ಕಂಗಾಲಾಗಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಬಳಿಕ ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ ಎಂದು ಘಟನಾ ಸ್ಥಳದಲ್ಲಿನ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.
.ಲೆಬನಾನ್: ಪೇಜರ್ ಬಳಿಕ ವಾಕಿ–ಟಾಕಿ, ಸೋಲಾರ್ ಉಪಕರಣಗಳ ಸ್ಫೋಟ; 9 ಸಾವು.ಲೆಬನಾನ್ ಮೇಲೆ ಇಸ್ರೇಲ್ ವಾಯು ದಾಳಿ; 10 ಮಂದಿ ಮೃತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.