ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Best School Prizes 2024: ಟಾಪ್‌ 10ರ ಪಟ್ಟಿಯಲ್ಲಿ ಭಾರತದ 5 ಶಾಲೆಗಳು

Published 17 ಜೂನ್ 2024, 15:30 IST
Last Updated 17 ಜೂನ್ 2024, 15:30 IST
ಅಕ್ಷರ ಗಾತ್ರ

ಲಂಡನ್‌: ಸಮಾಜದ ಏಳ್ಗೆಗಾಗಿ ಅಗಾಧ ಕೊಡುಗೆ ನೀಡಿದ ಶಾಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಬ್ರಿಟನ್‌ನ ಟಿ–4 ಸಂಸ್ಥೆಯು ಪ್ರಕಟಿಸಿದ ಟಾಪ್–10ರ ಸುತ್ತಿಗೆ ‘ಭಾರತದ ಐದು ಸ್ಫೂರ್ತಿದಾಯಕ ಶಾಲೆ’ಗಳು ಆಯ್ಕೆಯಾಗಿವೆ.

ಮಧ್ಯಪ್ರದೇಶದ ಎರಡು ಶಾಲೆಗಳು, ದೆಹಲಿ, ಮಹಾರಾಷ್ಟ್ರ, ತಮಿಳುನಾಡಿನ ತಲಾ ಒಂದು ಶಾಲೆ ವಿವಿಧ ವಿಭಾಗಗಳಲ್ಲಿ ಕಳೆದ ವಾರ ಪ್ರಕಟಿಸಿದ್ದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪ್ರಶಸ್ತಿಯ ಮೊತ್ತ 50 ಸಾವಿರ ಡಾಲರ್‌ (₹41,76,657) ಇದ್ದು, ಈ ಶಾಲೆಗಳು ಸಮಾನವಾಗಿ ಹಂಚಿಕೊಳ್ಳಲಿವೆ.

‘ಸಮುದಾಯದ ಸಹಭಾಗಿತ್ವ’, ‘ಪರಿಸರ ಕ್ರಿಯಾಯೋಜನೆ’, ‘ಸಂಶೋಧನೆ’, ‘ಪ್ರತಿಕೂಲ ಪರಿಸ್ಥಿತಿಯ ನಿವಾರಣೆ’, ‘ಆರೋಗ್ಯಯುತ ಜೀವನ ನಿರ್ವಹಣೆಗೆ ಪ್ರೋತ್ಸಾಹ’ ವಿಭಾಗಗಳಲ್ಲಿ ಅತ್ಯುತ್ತಮ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.

‘ಕೋವಿಡ್‌ ಬಳಿಕ ತರಗತಿಯಲ್ಲಿ ಮತ್ತು ಅದರಾಚೆಗಿನ ಜನರ ಜೀವನವನ್ನು ಬದಲಾಯಿಸುವ ಶಾಲೆಗಳಿಗೆ ವೇದಿಕೆಯನ್ನು ನೀಡಿ, ಪ್ರೋತ್ಸಾಹಿಸಲು ಟಿ–4 ಶಿಕ್ಷಣ ಸಂಸ್ಥೆಯು ಪ್ರಶಸ್ತಿ ನೀಡುತ್ತಿದೆ.

‘ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಸಿ.ಎಂ.ರೈಸ್‌ ಶಾಲೆ, ದೆಹಲಿಯ ವಸಂತ್‌ಕುಂಜ್‌ನಲ್ಲಿರುವ ರಾಯನ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಮಹಾರಾಷ್ಟ್ರದ ರತ್ಲಾಂ ಜಿಲ್ಲೆಯ ವಿನೋಬಾ ಅಂಬೇಡ್ಕರ್‌ ನಗರದ ಜಿ.ಎಚ್.ಎಸ್‌.ಎಸ್‌, ತಮಿಳುನಾಡಿನ ಮಧುರೈನ ಕಲ್ವಿ ಇಂಟರ್‌ನ್ಯಾಷನಲ್‌ ಸ್ಕೂಲ್‌, ಮುಂಬೈ ಪಬ್ಲಿಕ್‌ ಸ್ಕೂಲ್‌ ಎಲ್‌.ಕೆ.ವಾಗ್ಜಿ ಇಂಟರ್‌ನ್ಯಾಷನಲ್‌’ ಶಾಲೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ಈ ಶಾಲೆಗಳು ನಾವೀನ್ಯ ಸಂಶೋಧನೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ದು, ಸಾಕಷ್ಟು ಜನರ ಜೀವನದಲ್ಲಿ ಬದಲಾವಣೆ ತಂದಿವೆ. ಕಲಿಕೆಗೆ ಉತ್ತಮ ವಾತಾವರಣ ರೂಪಿಸಿದ್ದು, ಸರ್ಕಾರಿ ಶಾಲೆಗಳು ಅತ್ಯುತ್ತಮ ಸಾಧನೆ ಮಾಡಿವೆ’ ಎಂದು ಟಿ–4 ಸಂಸ್ಥೆಯ ಸಂಸ್ಥಾಪಕ ವಿಕಾಶ್‌ ಪೋತಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT