ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಗುಂಡಿನ ದಾಳಿ: ಮೂವರು ಕಪ್ಪು ವರ್ಣೀಯರ ಸಾವು

Published 27 ಆಗಸ್ಟ್ 2023, 13:50 IST
Last Updated 27 ಆಗಸ್ಟ್ 2023, 13:50 IST
ಅಕ್ಷರ ಗಾತ್ರ

ಜಾಕ್ಸನ್‌ವಿಲ್ಲೆ: ಅಮೆರಿಕದಲ್ಲಿ ಬಂದೂಕುಧಾರಿ ಶ್ವೇತ ವರ್ಣೀಯನೊಬ್ಬ ಮೂವರು ಕಪ್ಪು ವರ್ಣೀಯರನ್ನು ಗುಂಡಿಕ್ಕಿ ಕೊಂದ ಘಟನೆ ಫ್ಲಾರಿಡಾದ ಜಾಕ್ಸನ್‌ವಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಡಾಲರ್‌ ಜನರಲ್‌ ಸ್ಟೋರ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಸ್ಥಳಿಯ ಪೊಲೀಸ್‌ ಅಧಿಕಾರಿ ಟಿ.ಕೆ. ವಾಟರ್ಸ್‌ ಹೇಳಿದ್ದಾರೆ.

ಈ ಘಟನೆ ಬಳಿಕ ಬಂದೂಕುಧಾರಿ ವ್ಯಕ್ತಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೊಂದು ಜನಾಂಗೀಯ ಪ್ರೇರಿತ ದಾಳಿಯಂತೆ ತೋರುತ್ತಿದೆ ಎಂದು ವಾಟರ್ಸ್‌ ತಿಳಿಸಿದ್ದಾರೆ.

ಬಂದೂಕುಧಾರಿಯು 20 ವರ್ಷದ ಯುವಕನಾಗಿದ್ದು, ಈ ಕೃತ್ಯಕ್ಕೆ ಗ್ಲಾಕ್‌ ಗನ್‌ ಮತ್ತು ಎಆರ್‌–15 ಎಂಬ ಅರೆ ಸ್ವಯಂಚಾಲಿತ ಬಂದೂಕು ಬಳಸಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕೃತ್ಯ ಎಸಗಿದ ವ್ಯಕ್ತಿ ಕಪ್ಪು ವರ್ಣದವರನ್ನು ದ್ವೇಷಿಸುತ್ತಿದ್ದ. ಆತ ಯಾವುದೇ ಸಂಘಟನೆಗೆ ಸೇರಿದ್ದಾನೆ ಎಂಬುದಕ್ಕೆ ಖಚಿತ ಸಾಕ್ಷ್ಯವಿಲ್ಲ ಎಂದು ವಾಟರ್ಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT