ಇಸ್ಲಾಮಾಬಾದ್: ನೆರೆಯ ಆಫ್ಗಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಉತ್ತಮಪಡಿಸಿಕೊಳ್ಳಲು ಮುಂದಾಗಿರುವ ಪಾಕಿಸ್ತಾನ, ಕಾಬೂಲ್ಗೆ ತನ್ನ ರಾಯಭಾರಿಯನ್ನು ನೇಮಕ ಮಾಡಿ ಶುಕ್ರವಾರ ಆದೇಶಿಸಿದೆ.

ಕಾಬೂಲ್ ಅನ್ನು 2021ರಲ್ಲಿ ತಾಲಿಬಾನ್ ವಶಪಡಿಸಿಕೊಂಡಾಗ ಪಾಕಿಸ್ತಾನವು ತನಗೆ ನೆರವಾಗುವ ದೂರದೃಷ್ಟಿಯಿಂದ ಮೌನವಾಗಿ ಬೆಂಬಲಿಸಿತ್ತು. ಆದರೆ ತೆಹರೀಕ್ ಎ ತಾಲಿಬಾನ್ ಪಾಕಿಸ್ತಾನ (TTP) ಭಯೋತ್ಪಾದಕರು ಗಡಿಯಾಚಿಗಿನ ದಾಳಿಯನ್ನು ಹಲವುಪಟ್ಟು ಹೆಚ್ಚಿಸಿದ್ದರು. ಇದರ ಪರಿಣಾಮ ಪಾಕಿಸ್ತಾನವು ಕಾಬೂಲ್ ಅನ್ನು ದೂಷಿಸಲು ಆರಂಭಿಸಿತು. ಜತೆಗೆ ಟಿಟಿಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾರಂಭಿಸಿತು.

ಮಹತ್ವದ ಬೆಳವಣಿಗೆಯಲ್ಲಿ ಆಫ್ಗಾನಿಸ್ತಾನ, ಪಾಕಿಸ್ತಾನ ಹಾಗೂ ಚೀನಾ ನಡುವೆ ತ್ರಿಪಕ್ಷೀಯ ಮಾತುಕತೆ ಮೇನಲ್ಲಿ ಬೀಜಿಂಗ್ನಲ್ಲಿ ನಡೆಯಿತು. ಇದರ ಪರಿಣಾಮವಾಗಿ ಪಾಕಿಸ್ತಾನವು ಆಫ್ಗಾನಿಸ್ತಾನದೊಂದಿಗೆ ಬಾಂಧವ್ಯ ಬೆಸೆಯಲು ಮುಂದಾಗಿದೆ. ಉಭಯ ರಾಷ್ಟ್ರಗಳ ನಡುವಿನ ವೈಷಮ್ಯವನ್ನು ದೂರಮಾಡುವಲ್ಲಿ ಚೀನಾ ಪ್ರಮುಖಪಾತ್ರ ವಹಿಸಿದೆ. ಇದರ ಪರಿಣಾಮ ಎರಡೂ ರಾಷ್ಟ್ರಗಳು ತಮ್ಮ ರಾಜತಾಂತ್ರಿಕ ಕಚೇರಿಯನ್ನು ಪರಸ್ಪರ ತೆರೆಯಲು ನಿರ್ಧರಿಸಿವೆ.

ಕಾಬೂಲ್ನಲ್ಲಿ ತಮ್ಮ ರಾಯಭಾರ ಕಚೇರಿ ತೆರೆಯುವುದಾಗಿ ಪಾಕಿಸ್ತಾನದ ಉಪ ಪ್ರಧಾನಿ ಇಷಾಕ್ ದಾರ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ.

ಮತ್ತೊಂದೆಡೆ ಎರಡು ವರ್ಷಗಳ ನಂತರ ಆಫ್ಗಾನಿಸ್ತಾನದ ಮಧ್ಯಂತರ ಸರ್ಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಕಿ ಶೀಘ್ರದಲ್ಲಿ ಇಸ್ಲಾಮಾಬಾದ್ಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.