ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾದಲ್ಲಿ ಪ್ರವಾಹ: ಕನಿಷ್ಠ 2,300 ಜನ ಸಾವು

ಕರಾವಳಿ ನಗರ ಡೆರ್ನಾ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದು, ಸುಮಾರು ಒಂದು ಲಕ್ಷ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.
Published 12 ಸೆಪ್ಟೆಂಬರ್ 2023, 16:10 IST
Last Updated 12 ಸೆಪ್ಟೆಂಬರ್ 2023, 16:10 IST
ಅಕ್ಷರ ಗಾತ್ರ

ಬೆಂಘಾಜಿ (ಲಿಬಿಯಾ) (ಎಎಫ್‌ಪಿ): ಇಲ್ಲಿನ ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿ ಕನಿಷ್ಠ 2,300 ಜನರು ಮೃತಪಟ್ಟಿದ್ದು, ಹತ್ತು ಸಾವಿರ ಮಂದಿ ನಾಪತ್ತೆಯಾಗಿದ್ದಾರೆ.

ಕರಾವಳಿ ನಗರ ಡೆರ್ನಾ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ್ದು, ಸುಮಾರು ಒಂದು ಲಕ್ಷ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ನದಿ ತೀರದ ಹಲವು ಮನೆಗಳು ನೆಲಕ್ಕುರುಳಿವೆ. ಕಟ್ಟಡಗಳ ಅವಶೇಷಗಳು, ಕಾರುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. 

ಡೆರ್ನಾದಲ್ಲಿ ಮೃತದೇಹಗಳ ಗುರುತು ಪತ್ತೆಗಾಗಿ ಅವುಗಳನ್ನು ಹೊದಿಕೆಗಳಲ್ಲಿ ಸುತ್ತಿ ಸಾಲಾಗಿ ಮಲಗಿಸಿರುವ ದೃಶ್ಯಗಳು ಭೀಕರವಾಗಿವೆ.

‘ತುರ್ತು ಸೇವಾ ಸಿಬ್ಬಂದಿ ಅವಿರತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಭಗ್ನಾವಶೇಷಗಳಡಿ ಸಿಲುಕಿದ್ದ ಸಾವಿರಾರು ಮೃತದೇಹಗಳನ್ನು ಮಂಗಳವಾರ ಹೊರತೆಗೆದರು. ಈವರೆಗೆ ಕನಿಷ್ಠ 700 ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ’ ಎಂದು ಪೂರ್ವ ಲಿಬಿಯಾದ ಆರೋಗ್ಯ ಸಚಿವರು ತಿಳಿಸಿದ್ದಾರೆ.

‘ಡೆರ್ನಾದಲ್ಲಿ ಪರಿಸ್ಥಿತಿ ಭೀಕರ ಮತ್ತು ಆಘಾತಕಾರಿಯಾಗಿದೆ. ಇನ್ನೂ ಸಾವಿರಾರು ಜನರು ಅವಶೇಷಗಳಡಿ ಸಿಲುಕಿದ್ದು ಅವರ ರಕ್ಷಣೆಗೆ ಮತ್ತಷ್ಟು ಬೆಂಬಲ ಬೇಕಿದೆ’ ಎಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಒಸಾಮಾ ಆಲಿ ತಿಳಿಸಿದ್ದಾರೆ.

‘ನಗರದ ಹೊರವಲಯದಲ್ಲಿರುವ ಅಣೆಕಟ್ಟೆ ಒಡೆದ ಪರಿಣಾಮ ಭಾರಿ ಶಬ್ದವೊಂದು ಕೇಳಿಸಿತು. ಪ್ರವಾಹ ಉಂಟಾಗಿ ನದಿ ತೀರದ ನಗರವೇ ಕೊಚ್ಚಿ ಹೋಯಿತು’ ಎಂದು ಇಲ್ಲಿನ ನಿವಾಸಿ ಅಹ್ಮದ್‌ ಅಬ್ದುಲ್ಲಾ ತಮ್ಮ ನೋವು ತೋಡಿಕೊಂಡರು.

ನೆರವಿನ ಭರವಸೆ

ಭೀಕರ ಪ್ರವಾಹದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಲಿಬಿಯಾಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಪ್ರವಾಹಪೀಡಿತ ದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಿಬ್ಬಂದಿ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಹಲವು ದೇಶಗಳು ಭರವಸೆ ನೀಡಿವೆ. 

ಪೂರ್ವ ಲಿಬಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ನದಿ ತೀರದ ಪ್ರದೇಶ ಕೊಚ್ಚಿಹೋಗಿರುವುದು –ಎಎಫ್‌ಪಿ ಚಿತ್ರ
ಪೂರ್ವ ಲಿಬಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ನದಿ ತೀರದ ಪ್ರದೇಶ ಕೊಚ್ಚಿಹೋಗಿರುವುದು –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT