ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಾಟದಲ್ಲಿರುವಾಗಲೇ ವಿಮಾನಕ್ಕೆ ಬೆಂಕಿ: ವಿಡಿಯೊ ನೋಡಿದರೆ ಎದೆ ಝಲ್‌ ಎನ್ನುತ್ತೆ!

Published 19 ಜನವರಿ 2024, 13:22 IST
Last Updated 19 ಜನವರಿ 2024, 13:22 IST
ಅಕ್ಷರ ಗಾತ್ರ

ಮಿಯಾಮಿ: ‘ಅಟ್ಲಾಸ್‌ ಏರ್‌’ ಸಂಸ್ಥೆಯ ಬೋಯಿಂಗ್‌–747-8 ಕಾರ್ಗೊ ವಿಮಾನ ಟೇಕಾಫ್‌ ಆದ ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಸಿಬ್ಬಂದಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.

ಈ ಘಟನೆ ಅಮೆರಿಕದ ಮಿಯಾಮಿಯಿಂದ ವರದಿಯಾಗಿದೆ.

ವಿಮಾನ ಹಾರಾಟದಲ್ಲಿರುವಾಗಲೇ ಎಡ ರೆಕ್ಕೆಗೆ ಬೆಂಕಿ ಹೊತ್ತಿಕೊಂಡಿದ್ದ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ಬೋಯಿಂಗ್‌ ವಿಮಾನದ ದೃಶ್ಯವೇ ಎಂಬುದರ ಬಗ್ಗೆ ಖಾತ್ರಿಯಾಗಿಲ್ಲ ಎಂದು ವರದಿಗಳು ಹೇಳಿವೆ.

ಕಾರ್ಗೊ ವಿಮಾನದ ಎಂಜಿನ್‌ ದೋಷದ ಕಾರಣಕ್ಕೆ ಮಿಯಾಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ತುರ್ತು ಸಂದರ್ಭದ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುರಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ‘ ಎಂದು ಅಟ್ಲಾಸ್‌ ಏರ್‌ ತಿಳಿಸಿದೆ.

ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸುವುದಾಗಿಯೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT