ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಲ್ಬೋರ್ನ್‌: ವಿಮಾನದಲ್ಲಿ ಬೆತ್ತಲೆಯಾಗಿ ಓಡಾಡಿದ ವ್ಯಕ್ತಿಯ ಬಂಧನ

Published 28 ಮೇ 2024, 16:14 IST
Last Updated 28 ಮೇ 2024, 16:14 IST
ಅಕ್ಷರ ಗಾತ್ರ

ಮೆಲ್ಬೋರ್ನ್‌: ಆಸ್ಟ್ರೇಲಿಯಾ ಸ್ಫಳೀಯ ವಿಮಾನದಲ್ಲಿ ತನ್ನ ಆಸನ ಬಿಟ್ಟು ಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿಯೊಬ್ಬನನ್ನು ಹೊಡೆದುರುಳಿಸಿದ್ದಲ್ಲದೆ ವಿಮಾನವನ್ನು ಹಿಂದಕ್ಕೆ ತಿರುಗಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಒಬ್ಬನನ್ನು ವಿಮಾನನಿಲ್ದಾಣ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಪರ್ತ್‌ನಿಂದ ಮೆಲ್ಬರ್ನ್‌ಗೆ ತೆರಳುತ್ತಿದ್ದ ವರ್ಜಿನ್‌ ಆಸ್ಟ್ರೇಲಿಯಾ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಅಡ್ಡಿಪಡಿಸಿದ್ದರಿಂದಾಗಿ ವಿಎ696 ವಿಮಾನವು ಪರ್ತ್‌ನ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ಏರ್‌ಲೈನ್‌ ಹೇಳಿಕೆಯಲ್ಲಿ ತಿಳಿಸಿದೆ. 

ಬಂಧಿತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT