ನವದೆಹಲಿ/ಢಾಕಾ: ಬಾಂಗ್ಲಾದೇಶದ ರಾಜ್ಬರಿ ಜಿಲ್ಲೆಯ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಕಾರನ್ನು ತಡೆಯಲು ಯತ್ನಿಸಿದ್ದ, ಹಿಂದೂ ಧರ್ಮದ ರಿಪನ್ ಸಹಾ (30) ಎಂಬುವವರಿಗೆ ಕಾರು ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ, ಕಾರಿನ ಮಾಲೀಕ ಅಬುಲ್ ಹಶೀಮ್ ಅಲಿಯಾಸ್ ಸುಜನ್ (55) ಮತ್ತು ಚಾಲಕ ಕಮಲ್ ಹುಸೇನ್ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದಿದ್ದಾರೆ.

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್ಪಿ) ರಾಜ್ಬರಿ ಜಿಲ್ಲಾ ಘಟಕದ ಮಾಜಿ ಖಜಾಂಚಿ ಮತ್ತು ಜುಬೊ ದಾಲ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾಗಿರುವ ಹಶೀಮ್ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರದ ಇತ್ತೀಚಿನ ಘಟನೆ ಇದಾಗಿದೆ.

‘ಗೋಲಾಂಡ ಮೋರ್ನ ಕರೀಂ ಫಿಲ್ಲಿಂಗ್ ಸ್ಟೇಷನ್ಗೆ ಶುಕ್ರವಾರ ಬೆಳಗಿನ ಜಾವ 4.30ರ ಸುಮಾರಿಗೆ ಬಂದ ಹಶೀಮ್ ಹಾಗೂ ಹುಸೇನ್ ಅವರು 5 ಸಾವಿರ ಟಾಕಾ (₹3,710) ಮೌಲ್ಯದ ಪೆಟ್ರೋಲ್ ಹಾಕಿಕೊಂಡಿದ್ದಾರೆ.

ಹಣ ಪಾವತಿಸದೆ ಪರಾರಿಯಾಗಲು ಯತ್ನಿಸಿದಾಗ ರಿಪನ್ ಕಾರನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಕಾರನ್ನು ನಿಲ್ಲಿಸದೆ ರಿಪನ್ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು’ ಎಂದು ರಾಜ್ಬರಿ ಸದರ್ ಪೊಲೀಸ್ ಠಾಣೆಯ ಖೊಂಡಕರ್ ಜಿಯಾವುರ್ ರೆಹಮಾನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.