ವಾಷಿಂಗ್ಟನ್: ಅಕ್ರಮ ವಲಸಿಗರ ಮಕ್ಕಳಿಗೆ ಜನ್ಮದತ್ತವಾಗಿ ಅಮೆರಿಕ ಪೌರತ್ವ ಸಿಗುವುದನ್ನು ನಿರ್ಬಂಧಿಸುವ ಮಸೂದೆಯನ್ನು ರಿಪಬ್ಲಿಕನ್ ಪಕ್ಷದ ಕೆಲವು ಸೆನೆಟರ್ಗಳು ಬುಧವಾರ ಸೆನೆಟ್ನಲ್ಲಿ ಮಂಡಿಸಿದರು.

‘ಜನ್ಮದತ್ತವಾಗಿ ಪೌರತ್ವ ಹಕ್ಕು ಲಭಿಸುವುದರಿಂದಲೇ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಮತ್ತು ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ’ ಎಂದು ಈ ಮಸೂದೆಯನ್ನು ಮಂಡಿಸಿದ ಸೆನೆಟರ್ಗಳಾದ ಲಿಂಡ್ಸೆ ಗ್ರಹಾಂ, ಟೆಡ್ ಕ್ರೂಜ್ ಮತ್ತು ಕೇಟಿ ಬ್ರಿಟ್ ಅವರು ಹೇಳಿದ್ದಾರೆ.

ಜನ್ಮದತ್ತ ಪೌರತ್ವದ ಮೇಲೆ ಯಾವುದೇ ನಿರ್ಬಂಧಗಳಿಲ್ಲದ ವಿಶ್ವದ ಕೇವಲ 33 ದೇಶಗಳಲ್ಲಿ ಅಮೆರಿಕ ಕೂಡಾ ಒಂದು ಅವರು ಹೇಳಿದ್ದಾರೆ.

ಜನ್ಮದಿಂದಾಗಿ ಸಿಗುವ ಪೌರತ್ವದ ಹಕ್ಕು ರದ್ದುಪಡಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರಡಿಸಿದ್ದ ಆದೇಶಕ್ಕೆ ಸಿಯಾಟಲ್ನ ಜಿಲ್ಲಾ ನ್ಯಾಯಾಲಯವೊಂದು ತಾತ್ಕಾಲಿಕ ತಡೆ ನೀಡಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.