ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊಟ್ಸ್‌ವಾನ: ಪ್ರಪಂಚದ 2ನೇ ಅತಿ ದೊಡ್ಡ ವಜ್ರ ಪತ್ತೆ

ದೇಶದಲ್ಲೇ 100 ವರ್ಷಗಳ ಅವಧಿಯಲ್ಲಿ ಸಿಕ್ಕ ಅಸಾಧಾರಣ ವಜ್ರ
Published : 23 ಆಗಸ್ಟ್ 2024, 0:05 IST
Last Updated : 23 ಆಗಸ್ಟ್ 2024, 0:05 IST
ಫಾಲೋ ಮಾಡಿ
Comments

ಗಬರೋನೆ (ಬೊಟ್ಸ್‌ವಾನ): ಪ್ರಪಂಚದಲ್ಲಿ ಹೆಚ್ಚು ವಜ್ರವನ್ನು ಉತ್ಪಾದಿಸುವ 2ನೇ ದೇಶವಾಗಿರುವ ಬೊಟ್ಸ್‌ವಾನದ ಗಣಿಯೊಂದರಲ್ಲಿ ಬೃಹತ್‌ ವಜ್ರವೊಂದು ಪತ್ತೆಯಾಗಿದೆ. ಇದು ಬೊಟ್ಸ್‌ವಾನದಲ್ಲಿ ಈವರೆಗೆ ದೊರೆತ ಅತಿ ಹೆಚ್ಚು ತೂಕದ ವಜ್ರವಾಗಿದೆ. ಅಲ್ಲದೇ ಪ್ರಪಂಚದಲ್ಲೇ ಇದು ಈವರೆಗೆ ದೊರೆತಿರುವ 2ನೇ ದೊಡ್ಡ ವಜ್ರ ಎನ್ನಲಾಗಿದೆ. 

2,492 ಕ್ಯಾರಟ್‌ ಇರುವ ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್‌ವಾನ ತಿಳಿಸಿದೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಇಷ್ಟು ತೂಕದ ವಜ್ರ ಪತ್ತೆಯಾಗಿರಲಿಲ್ಲ. ಈ ಹಿಂದೆ 1905ರಲ್ಲಿ ದೊರೆತಿದ್ದ, 3,106 ಕ್ಯಾರಟ್ ವಜ್ರವನ್ನು ಹಲವಾರು ರತ್ನಗಳನ್ನಾಗಿ ಕತ್ತರಿಸಲಾಗಿತ್ತು. 

ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ‘ಲುಕಾರಾ ಡೈಮಂಡ್‌ ಕಾರ್ಪೊರೇಷನ್’ ಗಣಿಗಾರಿಕೆ ಸಂಸ್ಥೆಯು, ‘ಪಶ್ಚಿಮ ಬೊಟ್ಸ್‌ವಾನದ ಕರೋವೆ ಗಣಿಯಲ್ಲಿ ಅಸಾಧಾರಣ ವಜ್ರವೊಂದು ಪತ್ತೆಯಾಗಿದೆ. ವಜ್ರವು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ‘ಎಕ್ಸ್‌ ರೇ’ ತಂತ್ರಜ್ಞಾನದ ಮೂಲಕ ಅದನ್ನು ಪತ್ತೆ ಮಾಡಲಾಯಿತು’ ಎಂದು ತಿಳಿಸಿದೆ. 

ಈ ಹಿಂದೆ 2019ರಲ್ಲಿ ಇದೇ ಕರೋವೆ ಗಣಿಯಲ್ಲಿ ಪತ್ತೆಯಾಗಿದ್ದ 1,758 ಕ್ಯಾರಟ್‌ ‘ಸೆವೆಲೊ’ ವಜ್ರವನ್ನು ಪ್ರಪಂಚದ ಎರಡನೇ ಅತಿ ದೊಡ್ಡ ವಜ್ರ ಎಂದು ಗುರುತಿಸಲಾಗಿತ್ತು. ಫ್ರೆಂಚ್‌ ಫ್ಯಾಷನ್‌ ಹೌಸ್‌ ‘ಲೂಯಿ ವಿಟೋನ್‌’ ಆ ವಜ್ರವನ್ನು ಖರೀದಿಸಿತ್ತು. ಆದರೆ ಅದರ ಮೊತ್ತವನ್ನು ಬಹಿರಂಗಪಡಿಸಿಲ್ಲ. 

ಬೋಟ್ಸವಾನ ಅಧ್ಯಕ್ಷ ಮೊಕ್ಸ್‌ವೀಟ್ಸಿ ಮಾಸಿಸಿ ಅವರು ಕರೋವೆ ಗಣಿಯಲ್ಲಿ ದೊರೆತ 2492 ಕ್ಯಾರಟ್‌ ವಜ್ರವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದರು – ಎಎಫ್‌ಪಿ ಚಿತ್ರ 
ಬೋಟ್ಸವಾನ ಅಧ್ಯಕ್ಷ ಮೊಕ್ಸ್‌ವೀಟ್ಸಿ ಮಾಸಿಸಿ ಅವರು ಕರೋವೆ ಗಣಿಯಲ್ಲಿ ದೊರೆತ 2492 ಕ್ಯಾರಟ್‌ ವಜ್ರವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದರು – ಎಎಫ್‌ಪಿ ಚಿತ್ರ 
2,492 ಕ್ಯಾರಟ್‌ನ ವಜ್ರ ಕರೋವೆ ಗಣಿಯಲ್ಲಿ ಪತ್ತೆ 1905ರಲ್ಲಿ 3,106 ಕ್ಯಾರಟ್ ವಜ್ರ ದೊರೆತಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT