ಸಾವೊ ಪಾಲೊ: ಕೋವಿಡ್–19ನಿಂದ ಬ್ರೆಜಿಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 909 ಜನರು ಮೃತಪಟ್ಟಿದ್ದಾರೆ. ಇದರಿಂದ ಈ ಸೋಂಕಿಗೆ ದೇಶದಲ್ಲಿ ಇಲ್ಲಿವರೆಗೆ ಮೃತಪಟ್ಟವರ ಸಂಖ್ಯೆ41,828ಕ್ಕೆ ಏರಿದೆ. ಈ ಮೂಲಕ ಜಗತ್ತಿನಲ್ಲಿ ಹೆಚ್ಚು ಸಾವು ಘಟಿಸಿದ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಎರಡನೇ ಸ್ಥಾನಕ್ಕೇರಿದೆ.

ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಈ ಮಾಹಿತಿಯನ್ನು ದೃಢೀಕರಿಸಿದೆ. ಕೋವಿಡ್ ಸಾವುಗಳ ಸಂಖ್ಯೆಯಲ್ಲಿ ಈವರೆಗೆ ಎರಡನೇ ಸ್ಥಾನದಲ್ಲಿದ್ದ ಯುನೈಟೆಡ್ ಕಿಂಗ್‌ಡಂ ಅನ್ನು ಬ್ರೆಜಿಲ್ ಮೀರಿಸಿದೆ.

ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 909 ಜನರು ಸತ್ತಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿಯೇ ಕೋವಿಡ್ ಪರಿಣಾಮ ಹೆಚ್ಚಿರುವ ದೇಶ ಬ್ರೆಜಿಲ್ ಆಗಿದೆ. ಒಟ್ಟು 8.28 ಲಕ್ಷ ಜನರಿಗೆ ಸೋಂಕು ತಗುಲಿದೆ.

ಎರಡು ತಿಂಗಳು ವಿಧಿಸಲಾಗಿದ್ದ ನಿಬಂಧನೆಗಳನ್ನು ಈಚೆಗೆ ತೆರವುಗೊಳಿಸಿದ ಹಿಂದೆಯೇ ಈ ಅಂಕಿ ಅಂಶಗಳು ಹೊರಬಿದ್ದಿವೆ. ಕೋವಿಡ್ ಪಿಡುಗಿನ ಕೇಂದ್ರವಾಗಿ ಪರಿಣಮಿಸಿರುವ ಸಾವೊಪಾಲೊದಲ್ಲಿ ಶಾಪ್ ಮತ್ತು ಮಾಲ್‌ಗಳನ್ನು ನಿತ್ಯ ನಾಲ್ಕು ಗಂಟೆ ತೆರೆಯಲು ಅನುಮತಿ ನೀಡಲಾಗಿದೆ.

ನಿರ್ಬಂಧ ಕ್ರಮಗಳು ತೆರವಾದಂತೆ ದೇಶದ ಸಣ್ಣ ನಗರಗಳಲ್ಲಿರುವ ಬಹುತೇಕ ಮಳಿಗೆಗಳಲ್ಲಿ ಹೆಚ್ಚಿನ ಜನದಟ್ಟಣೆಯು ಕಂಡುಬರುತ್ತಿದೆ.

ಲ್ಯಾಟಿನ್ ಅಮೆರಿಕದಲ್ಲಿ ಬ್ರೆಜಿಲ್ ಮತ್ತು ಉತ್ತರ ಅಮೆರಿಕದ ಮೆಕ್ಸಿಕೊದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಇನ್ನಷ್ಟು ತುರ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮೆಕ್ಸಿಕೊದಲ್ಲಿ ಇಲ್ಲಿಯವರೆಗೆ ಸುಮಾರು 1.30 ಲಕ್ಷ ಜನರಲ್ಲಿ ಸೋಂಕು ದೃಢವಾಗಿದ್ದು, 15 ಸಾವಿರ ಜನರು ಮೃತಪಟ್ಟಿದ್ದಾರೆ.ಅತಿ ಹೆಚ್ಚು ಜನಬಾಹುಳ್ಯವಿರುವ ಟೆಕ್ಸಾಸ್, ಫ್ಲಾರಿಡಾಗಳಲ್ಲೂ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.