ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವಿರುದ್ಧ ಅಜಿತ್‌ ಡೊಭಾಲ್‌ ಪರೋಕ್ಷ ವಾಗ್ದಾಳಿ

Published 26 ಜುಲೈ 2023, 15:24 IST
Last Updated 26 ಜುಲೈ 2023, 15:24 IST
ಅಕ್ಷರ ಗಾತ್ರ

ಜೊಹಾನಸ್‌ಬರ್ಗ್‌: ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯಡಿ ಭಯೋತ್ಪಾದಕರನ್ನು ಪಟ್ಟಿ ಮಾಡಲು  ಬ್ರಿಕ್ಸ್‌ ದೇಶಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆದರೆ ಆ ಪ್ರಕ್ರಿಯೆಯು ರಾಜಕೀಯ ಮತ್ತು ದ್ವಿಮುಖ ನೀತಿಗಳಿಂದ ಮುಕ್ತವಾಗಿರಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮಂಗಳವಾರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ವಾಂಗ್‌ ಯಿ ಇದ್ದರು. ವಾಂಗ್‌ ಯಿ ಅವರು 2013ರಿಂದ 2022ರ ವರೆಗೆ ದೇಶದ ವಿದೇಶಾಂಗ ಸಚಿವರಾಗಿದ್ದರು. 

‘ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಬಹುದೊಡ್ಡ ಸವಾಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ನಿರ್ಧಾರವು ರಾಜಕೀಯ ಮತ್ತು ದ್ವಿಮುಖ ನೀತಿಗಳಿಂದ ಮುಕ್ತವಾಗಿರುವುದು ಅವಶ್ಯಕ’ ಎಂದು ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ ಡೋಭಾಲ್‌ ಹೇಳಿದರು. 

ಲಷ್ಕರ್–ಎ–ತಯಬಾ ಮತ್ತು ಪಾಕಿಸ್ತಾನ ಮೂಲದ ಇತರ ಅಂತರರಾಷ್ಟ್ರೀಯ ಉಗ್ರ ಸಂಘಟನೆಗಳನ್ನು ಹೆಡೆಮುರಿಕಟ್ಟುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಲುವಿಗೆ ಪಾಕಿಸ್ತಾನದೊಂದಿಗೆ ಅಪರಿಮಿತ ಮಿತ್ರತ್ವ ಹೊಂದಿರುವ ಚೀನಾ ಪದೇ ಪದೇ ಅಡ್ಡಗಾಲು ಹಾಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT