ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗಾಂಡದಲ್ಲಿ ಎನ್‌ಎಫ್‌ಎಸ್‌ಯು ಕ್ಯಾಂಪಸ್‌ ಉದ್ಘಾಟನೆ

ದ್ವಿಪಕ್ಷೀಯ ಸಹಯೋಗದ ಮಹತ್ವದ ಮೈಲುಗಲ್ಲು: ಜೈಶಂಕರ್‌ ಬಣ್ಣನೆ
Last Updated 12 ಏಪ್ರಿಲ್ 2023, 11:19 IST
ಅಕ್ಷರ ಗಾತ್ರ

ಕಂಪಾಲ (ಪಿಟಿಐ): ಭಾರತದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಎಫ್ಎಸ್‌ಯು) ಮೊದಲನೇ ಸಾಗರೋತ್ತರ ಕ್ಯಾಂಪಸ್‌ ಅನ್ನು ಉಗಾಂಡದ ಜಿಂಜಾದಲ್ಲಿ ತೆರೆಯಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಉಪಸ್ಥಿತಿಯಲ್ಲಿ ಈ ಕ್ಯಾಂಪಸ್‌ನ ಉದ್ಘಾಟನೆಯನ್ನು ಬುಧವಾರ ನೆರವೇರಿಸಲಾಯಿತು.

‘ಉಗಾಂಡದ ಉಗಾಂಡನ್‌ ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌ ಸಹಭಾಗಿತ್ವದಲ್ಲಿ ಈ ಕ್ಯಾಂಪಸ್‌ ತೆರೆಯಲಾಗಿದೆ. ನಮ್ಮ ದ್ವಿಪಕ್ಷೀಯ ಸಹಯೋಗದ ಮಹತ್ವದ ಮೈಲುಗಲ್ಲು ಸಾಧನೆಗೆ ಸಾಕ್ಷಿಯಾಗಲು ನಾವಿಲ್ಲಿ ಸೇರಿದ್ದೇವೆ. ಎರಡೂ ದೇಶಗಳು ಹೆಮ್ಮೆಪಡುವ ದಿನ ಇದು’ ಎಂದು ಉದ್ಘಾಟನಾ ಸಮಾರಂಭದಲ್ಲಿ ಜೈಶಂಕರ್‌ ಹೇಳಿದರು.

‘ವಿದೇಶದಲ್ಲಿ ಕ್ಯಾಂಪಸ್‌ ತೆರೆಯುತ್ತಿರುವ ಭಾರತದ ಮೊದಲ ಸರ್ಕಾರಿ ವಿಶ್ವವಿದ್ಯಾಲಯ ಇದಾಗಿದೆ. ನಾನು ಸಂಸತ್ತನ್ನು ಪ್ರತಿನಿಧಿಸುವ ಗುಜರಾತ್‌ ರಾಜ್ಯದಲ್ಲೇ ಈ ವಿಶ್ವವಿದ್ಯಾಲಯ ಇರುವುದು ನನ್ನ ಸಂಭ್ರಮವನ್ನು ಹೆಚ್ಚಿಸಿದೆ’ ಎಂದು ಹೇಳಿದರು.

ಉಗಾಂಡದ ಉಪ ಪ್ರಧಾನಿ, ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಜೈಶಂಕರ್‌ ಅವರು ಏಪ್ರಿಲ್‌ 10ರಿಂದ 15ರ ವರೆಗೆ ಉಗಾಂಡ ಮತ್ತು ಮೊಜಾಂಬಿಕ್‌ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT