ವಾಷಿಂಗ್ಟನ್: ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಮನೆ ಬಾಡಿಗೆ ಪಾವತಿಸಲಾಗದೇ ಪರಿತಪಿಸುತ್ತಿದ್ದ ಜನರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರ (ಸಿಡಿಸಿ) ‘ಬಾಡಿಗೆ ಪಾವತಿಸದಿದ್ದರೂ ಅವರನ್ನು ಮನೆಗಳಿಂದ ಹೊರ ಹಾಕದಂತೆ ರಕ್ಷಿಸುವಂತಹ ಹೊಸ ನಿಯಮ'ವನ್ನು ಜಾರಿಗೊಳಿಸಿದೆ.

ಮಂಗಳವಾರ ಈ ಹೊಸ ನಿಯಮವನ್ನು ಪ್ರಕಟಿಸಲಾಗಿದ್ದು, ಇದು ಅಕ್ಟೋಬರ್ 3ರವರೆಗೆ ಜಾರಿಯಲ್ಲಿರಲಿದೆ. ಈ ಹೊಸ ನಿಯಮದಿಂದಾಗಿ ಲಕ್ಷಾಂತರ ಬಾಡಿಗೆ ಮನೆ ನಿವಾಸಿಗಳಿಗೆ ನೆಮ್ಮದಿ ನೀಡಿದೆ.

ಕೊರೊನಾ ಡೆಲ್ಟಾ ರೂಪಾಂತರ ತಳಿ ಹರಡುತ್ತಿರುವುದರ ಜೊತೆಗೆ, ರಾಜ್ಯ ಸರ್ಕಾರಗಳು ಬಾಡಿಗೆ ಸಹಾಯ ಧನವನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಘೋಷಿಸಿದ ಈ ಹೊಸ ನಿಯಮದಿಂದ ಲಕ್ಷಾಂತರ ಜನರು ನೆಮ್ಮದಿಯಾಗಿ ಈಗಿರುವ ಮನೆಗಳಲ್ಲೇ ಮುಂದುವರಿಸಲು ಸಹಾಯವಾಗಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳವರೆಗೆ ಇಂಥದ್ದೊಂದು ಬಾಡಿಗೆದಾರರ ರಕ್ಷಣೆ ನಿಯಮ ಜಾರಿಯಯಲ್ಲಿತ್ತು. ವರ್ಷಾಂತ್ಯಕ್ಕೆ ಅದು ಅಂತ್ಯಗೊಂಡಿತ್ತು. ಇದರಿಂದ ಬಾಡಿಗೆದಾರರು ಆತಂಕಕ್ಕೆ ಒಳಗಾಗಿದ್ದವು. ಈ ವಿಚಾರವಾಗಿ ಪ್ರಗತಿಪರ ಸಂಘಟನೆಗಳು ಸರ್ಕಾರದ ವಿರುದ್ಧ ಟೀಕೆ ಆರಂಭಿಸಿದ್ದವು. ಇವೆಲ್ಲವನ್ನೂ ತಣಿಸುವುದಕ್ಕಾಗಿ ಜೋ ಬೈಡನ್ ಆಡಳಿತ, ಹೊಸ ನಿಯಮವನ್ನು ಸಿಡಿಸಿ ಮೂಲಕ ಜಾರಿಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.