ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ಸಾರ್ವತ್ರಿಕ ಚುನಾವಣೆ: ಅಂತರರಾಷ್ಟ್ರೀಯ ವೀಕ್ಷಕರಾಗಿ ರಾಜೀವ್‌ ಕುಮಾರ್

Last Updated 18 ನವೆಂಬರ್ 2022, 13:13 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದಲ್ಲಿ ಭಾನುವಾರ ನಡೆಯುವಸಾರ್ವತ್ರಿಕ ಚುನಾವಣೆಗೆ ಅಂತರರಾಷ್ಟ್ರೀಯ ವೀಕ್ಷಕರ ತಂಡದ ನೇತೃತ್ವವನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ವಹಿಸಿದ್ದಾರೆ.

ಇಲ್ಲಿನ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದ ರಾಜೀವ್ ಕುಮಾರ್‌ ನೇತೃತ್ವದ ತಂಡವನ್ನು ನೇಪಾಳ ಚುನಾವಣಾ ಆಯೋಗದ ಜಂಟಿ ಕಾರ್ಯದರ್ಶಿ ಶಾಲಿಗ್ರಾಮ್‌ ಶರ್ಮಾ ಪೌದೆಲ್‌ ಅವರು ಸ್ವಾಗತಿಸಿದರು.

ಭಾರತ ಚುನಾವಣಾ ಆಯೋಗದ ಇಬ್ಬರು ಅಧಿಕಾರಿಗಳು ಸೇರಿ ಈ ತಂಡದಲ್ಲಿ ನಾಲ್ವರು ಸದಸ್ಯರಿದ್ದಾರೆ.

ಸಂಸತ್‌ನ 275 ಸ್ಥಾನಗಳು ಮತ್ತು ಏಳು ‍ಪ್ರಾಂತ್ಯದ ವಿಧಾನಸಭೆಗಳ 550 ಸ್ಥಾನಗಳಿಗೆ ಇದೇ 20 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT