ಸಿಂಗಾಪುರ: ಸಿಂಗಾಪುರದ ಶಾಲೆಗಳಲ್ಲಿ ತೆಲುಗನ್ನು ಎರಡನೇ ಭಾಷೆಯಾಗಿ ಕಲಿಸಬೇಕೆಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರೆ ನೀಡಿದರು. ಇಲ್ಲಿನ ಒನ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಡಿಜಿಟಲ್ ಕ್ಯಾಂಪಸ್ನಲ್ಲಿ ಸುಮಾರು 2 ಸಾವಿರ ಅನಿವಾಸಿ ಭಾರತೀಯರೊಂದಿಗೆ ಅವರು ಮಾತನಾಡುತ್ತಿದ್ದರು.

ಆಂಧ್ರ ಪ್ರದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಐದು ದಿನಗಳ ಅಧೀಕೃತ ಭೇಟಿಗಾಗಿ ಅವರು ಸಿಂಗಾಪುರಕ್ಕೆ ಬಂದಿದ್ದಾರೆ.

ಸಿಂಗಾಪುರದಲ್ಲಿ ತೆಲುಗು ಮೂಲದ ಸುಮಾರು 40 ಸಾವಿರ ಜನರಿದ್ದಾರೆ ಎಂದು ಸಮುದಾಯದ ನಾಯಕರೊಬ್ಬರು ಹೇಳಿದ್ದಾರೆ. ಸಿಂಗಾಪುರದ ನಾಲ್ಕು ಅಧಿಕೃತ ಭಾಷೆಗಳಲ್ಲಿ ತಮಿಳು ಕೂಡ ಒಂದು. ಇಲ್ಲಿನ ಶಾಲೆಗಳಲ್ಲಿ ಮಾತೃಭಾಷೆಯಾಗಿ ಹಿಂದಿ, ಪಂಜಾಬಿ ಆಯ್ಕೆ ಮಾಡಿಕೊಳ್ಳಲೂ ಅವಕಾಶವಿದೆಉ ಎಂದು ಹೇಳಿದರು.

‘ತೆಲುಗು ಭಾಷೆಯನ್ನು ಎರಡನೇ ಭಾಷೆಯಾಗಿ ಕಲಿಸುವಂತೆ ಸಿಂಗಾಪುರ ಸರ್ಕಾರದ ಜೊತೆಗೆ ಚರ್ಚಿಸುವಂತೆ ನನ್ನನ್ನು ಚಂದ್ರಬಾಬು ನಾಯ್ಡು ಕೇಳಿಕೊಂಡರು’ ಎಂದು ಭಾರತೀಯ ಹೈಕಮಿಷನರ್ ಡಾ. ಶಿಲ್ಪಕ್ ಅಂಬುಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.