ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪಿನ್ಸ್ ಬೆಂಬಲಿಸಿ ನಮ್ಮ ಸಾರ್ವಭೌಮತೆ ಉಲ್ಲಂಘಿಸಿದ ಕೆನಡಾ: ಚೀನಾ ಆರೋಪ

Published 14 ಡಿಸೆಂಬರ್ 2023, 3:27 IST
Last Updated 14 ಡಿಸೆಂಬರ್ 2023, 3:27 IST
ಅಕ್ಷರ ಗಾತ್ರ

ಒಟ್ಟಾವ: ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ಸಂಬಂಧಿಸಿದಂತೆ ಫಿಲಿಪಿನ್ಸ್‌ಗೆ ಬೆಂಬಲ ನೀಡಿರುವ ಕೆನಡಾ ತನ್ನ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಚೀನಾ ಆರೋಪಿಸಿದೆ.

'ದಕ್ಷಿಣ ಚೀನಾ ಸಮುದ್ರವು ಇಲ್ಲಿನ ರಾಷ್ಟ್ರಗಳ ಸಾಮಾನ್ಯ ನೆಲೆಯಾಗಿದೆ. ಅದನ್ನು ಕೆನಡಾ, ಅಮೆರಿಕ ಮತ್ತು ಇತರ ರಾಷ್ಟ್ರಗಳು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು' ಎಂದು ಕೆನಡಾದಲ್ಲಿರುವ ಚೀನಾ ರಾಯಭಾರಿ ಕಚೇರಿ ವಕ್ತಾರ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಫಿಲಿಪಿನ್ಸ್‌ ಕಳೆದ ಕೆಲವು ತಿಂಗಳುಗಳಿಂದ ತಿಕ್ಕಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT