ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಶಿಶುವಿಹಾರದ ಮಕ್ಕಳಿಗೆ ವಿಷವುಣಿಸಿದ ಶಿಕ್ಷಕಿಗೆ ಮರಣದಂಡನೆ

Published 14 ಜುಲೈ 2023, 13:26 IST
Last Updated 14 ಜುಲೈ 2023, 13:26 IST
ಅಕ್ಷರ ಗಾತ್ರ

ಬೀಜಿಂಗ್: ಶಿಶುವಿಹಾರದ 25 ಮಕ್ಕಳಿಗೆ ವಿಷವುಣಿಸಿ, ಒಂದು ಮಗುವಿನ ಸಾವಿಗೆ ಕಾರಣವಾಗಿದ್ದ ಶಿಕ್ಷಕಿಗೆ ಮರಣದಂಡನೆ ಜಾರಿಗೊಳಿಸಲಾಗಿದೆ ಎಂದು ಮಧ್ಯ ಚೀನಾದ ನ್ಯಾಯಾಲಯವೊಂದು ಹೇಳಿದೆ.

2019ರ ಮಾರ್ಚ್ 27ರಂದು ಶಿಶುವಿಹಾರದ ಮಕ್ಕಳಿಗೆ ಆಹಾರದಲ್ಲಿ ವಿಷಕಾರಿ ಸೋಡಿಯಂ ನೈಟ್ರೈಟ್ ಬೆರೆಸಿ ತಿನ್ನಿಸಿರುವ ಪ್ರಕರಣದ ಅಪರಾಧಿ 40 ವರ್ಷದ ವಾಂಗ್‌ ಯೂನ್‌ಗೆ ಶಿಕ್ಷೆ ಜಾರಿಗೊಳಿಸಿರುವುದಾಗಿ ಹೆನಾನ್‌ ಪ್ರಾಂತ್ಯದ ಜಿಯಾವುಝುವೊ ನಗರದ ನ್ಯಾಯಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಸಹೋದ್ಯೋಗಿಯೊಂದಿಗೆ ನಡೆದ ವಾಗ್ವಾದದ ಕಾರಣ ಈಕೆ ಈ ಕೃತ್ಯ ಎಸಗಿದ್ದಳು ಎಂದು ಆರೋಪಿಸಲಾಗಿತ್ತು.

ವಿಷ ಬೆರೆಸಿದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಇತರ ಮಕ್ಕಳು ಆಸ್ಪತ್ರೆಯಲ್ಲಿ ಶೀಘ್ರ ಚೇತರಿಸಿಕೊಂಡಿದ್ದರೆ, ಒಂದು ಮಗು ಮಾತ್ರ ಹತ್ತು ತಿಂಗಳ ಕಾಲ ಚಿಕಿತ್ಸೆಯಲ್ಲಿದ್ದು ಬಳಿಕ ಮೃತಪಟ್ಟಿತ್ತು. 

ವಾಂಗ್‌ ಈ ಹಿಂದೆ ತನ್ನ ಗಂಡನಿಗೂ ವಿಷವುಣಿಸಿದ್ದು, ಆತ ಚೇತರಿಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ವಾಂಗ್‌ಗೆ ಆರಂಭದಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಬಳಿಕ ಅದನ್ನು ಮರಣದಂಡನೆಯಾಗಿ ಪರಿವರ್ತಿಸಲಾಗಿತ್ತು. ವಾಂಗ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಆಕೆಗೆ ಶಿಕ್ಷೆ ಜಾರಿಗೊಳಿಸಲಾಯಿತು ಎಂದು ವಿವರಿಸಿವೆ.

ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಚೀನಾದಲ್ಲಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕೈದಿಗಳಿಗೆ ಮರಣದಂಡನೆ ವಿಧಿಸಲಾಗುತ್ತಿದೆ. ಆದರೆ ಈ ಕುರಿತ ದತ್ತಾಂಶಗಳು ಬಹಿರಂಗಗೊಳ್ಳುತ್ತಿಲ್ಲ ಎಂದೂ ತಿಳಿಸಿವೆ.

ಚೀನಾದಲ್ಲಿ ಕೈದಿಗಳ ತಲೆಗೆ ಹಿಂಬದಿಯಿಂದ ಗುಂಡು ಹಾರಿಸಿ ಅಥವಾ ಮಾರಕ ವಿಷದ ಚುಚ್ಚುಮದ್ದು ನೀಡಿ ಮರಣದಂಡನೆ ಜಾರಿಗೊಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT