ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಗುರಿಯಾಗಿಸಿ ಚೀನಾ ಎ.ಐ ದುರ್ಬಳಕೆ

ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ ಎಚ್ಚರಿಕೆ
Published 6 ಏಪ್ರಿಲ್ 2024, 14:45 IST
Last Updated 6 ಏಪ್ರಿಲ್ 2024, 14:45 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಚೀನಾ ತನ್ನ ಹಿತಾಸಕ್ತಿಗಾಗಿ ಭಾರತ ಮತ್ತು ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಚುನಾವಣೆಗಳನ್ನು ಗುರಿಯಾಗಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ದುರುಪಯೋಗ ಮಾಡಿಕೊಳ್ಳಬಹುದು ಎಂದು ತಂತ್ರಜ್ಞಾನ ದೈತ್ಯ ಮೈಕ್ರೋಸ್ಟಾಫ್‌ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವಾಗ ಚೀನಾ ತನ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿಗೆ ಪೂರಕವಾಗುವಂತೆ, ಜನಾಭಿಪ್ರಾಯ ರೂಪಿಸಲು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವಿಷಯಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿಬಿಡುವ ಸಾಧ್ಯತೆ ಇದೆ. ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರುವಂತಹ ಈ ಕೃತ್ಯವನ್ನು ಚೀನಾ ಉತ್ತರ ಕೊರಿಯಾದ ಜತೆ ಸೇರಿ ನಡೆಸುತ್ತಿದೆ ಎಂದು ಅದು ಎಚ್ಚರಿಸಿದೆ.

ಭಾರತದಲ್ಲಿ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19ರಿಂದ ಜೂನ್‌ 4ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕೊರಿಯಾದಲ್ಲೂ ಸಾರ್ವತ್ರಿಕ ಚುನಾವಣೆ ಏಪ್ರಿಲ್‌ 10ರಂದು ಮತ್ತು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್‌ 5 ರಂದು  ನಡೆಯಲಿದೆ.

‘ಈ ವರ್ಷ ಪ್ರಪಂಚದಾದ್ಯಂತ, ಅದರಲ್ಲೂ ವಿಶೇಷವಾಗಿ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ಪ್ರಮುಖ ಚುನಾವಣೆಗಳು ನಡೆಯುತ್ತಿವೆ. ಚೀನಾ ತನ್ನ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಎ.ಐ.ನಿಂದ ಸೃಷ್ಟಿಸಲಾದ ಒಂದಿಷ್ಟು ವಿಷಯಗಳನ್ನು ಹರಿಯಬಿಡಬಹುದೆಂದು ನಾವು ಅಂದಾಜಿಸಿದ್ದೇವೆ’ ಎಂದು ಮೈಕ್ರೋಸಾಫ್ಟ್ ಥ್ರೆಟ್ ಅನಾಲಿಸಿಸ್ ಸೆಂಟರ್‌ನ (ಎಂಟಿಎಸಿ) ಪ್ರಧಾನ ವ್ಯವಸ್ಥಾಪಕ ಕ್ಲಿಂಟ್ ವಾಟ್ಸ್ ಅವರು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT