ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನ್ಯಾಟೊ ಮಿತ್ರರಾಷ್ಟ್ರ ಸ್ಥಾನಕ್ಕೆ ಶಿಫಾರಸು

Published 27 ಮೇ 2023, 15:52 IST
Last Updated 27 ಮೇ 2023, 15:52 IST
ಅಕ್ಷರ ಗಾತ್ರ

ವಾಷಿಗ್ಟಂನ್‌: ನ್ಯಾಟೊ ಮಿತ್ರರಾಷ್ಟ್ರ(ನ್ಯಾಟೊ ಪ್ಲಸ್‌)ಗಳ ಪಟ್ಟಿಗೆ ಭಾರತವನ್ನೂ ಸೇರ್ಪಡೆಗೊಳಿಸುವ ಮೂಲಕ ಆ ದೇಶಗಳ ರಕ್ಷಣಾ ಸಾಮರ್ಥ್ಯವನ್ನು ಬಲಗೊಳಿಸಬೇಕು ಎಂದು ಅಮೆರಿಕದಲ್ಲಿರುವ ಚೀನಾದ ಉನ್ನತಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ಪ್ರಸ್ತುತ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್‌, ಇಸ್ರೇಲ್‌ ಮತ್ತು ದಕ್ಷಿಣ ಕೊರಿಯಾ ನ್ಯಾಟೊ ಮಿತ್ರರಾಷ್ಟ್ರಗಳಾಗಿವೆ. ಇವು ಪ್ರಮುಖ ರಾಷ್ಟ್ರಗಳೊಂದಿಗೆ ರಕ್ಷಣೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಜೂನ್‌ನಲ್ಲಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಭಾರತಕ್ಕೆ ನ್ಯಾಟೊ ಮಿತ್ರರಾಷ್ಟ್ರದ ಸ್ಥಾನ ನೀಡಬೇಕೆಂಬ ಸಮಿತಿಯ ಶಿಫಾರಸು ಮಹತ್ವ ಪಡೆದಿದೆ. ಆ ಮೂಲಕ ಜಾಗತಿಕ ರಕ್ಷಣಾ ಸಹಕಾರಕ್ಕೆ ಬಲ ನೀಡುವುದು ಇದರ ಹಿಂದಿರುವ ಮೂಲ ಆಶಯ. ಇದರಿಂದ ಈ ರಾಷ್ಟ್ರಗಳ ನಡುವಣ ರಕ್ಷಣಾ ಪಾಲುದಾರಿಕೆಯ ಹಾದಿಯೂ ಸುಗಮವಾಗಲಿದೆ.

ಅಮೆರಿಕ ಮತ್ತು ಚೀನಾ ಕಮ್ಯೂನಿಸ್ಟ್‌ ಪಕ್ಷದ(ಸಿಸಿಪಿ) ಕಾರ್ಯತಂತ್ರ ರೂಪಿಸಿರುವ ಸಂಬಂಧ ರಚನೆಯಾಗಿರುವ ಉನ್ನತಮಟ್ಟದ ಸಮಿತಿಯ ಮುಖ್ಯಸ್ಥ ಮೈಕ್ ಗಲ್ಲಾಘರ್ ಹಾಗೂ ಸದಸ್ಯ ರಾಜಾ ಕೃಷ್ಣಮೂರ್ತಿ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿದೆ. ಇದು ಚೀನಾ ಸಮಿತಿಯೆಂದೇ ‍ಪ್ರಸಿದ್ಧಿ ಪಡೆದಿದೆ.

ನ್ಯಾಟೊ ಪ್ಲಸ್‌ಗೆ ಭಾರತ ಸೇರಿದರೆ ಮಿತ್ರರಾಷ್ಟ್ರಗಳ ನಡುವಣ ಯಾವುದೇ ಅಡೆತಡೆ ಇಲ್ಲದೆ ಬೌದ್ಧಿಕ ಜ್ಞಾನ ಮತ್ತು ಕೌಶಲಗಳ ವಿನಿಮಯ ಸುಲಭವಾಗಲಿದೆ. ಜೊತೆಗೆ, ರಕ್ಷಣಾ ಕ್ಷೇತ್ರದಲ್ಲಿನ ನವೀನ ತಂತ್ರಜ್ಞಾನ ಅರಿಯಲು ಭಾರತಕ್ಕೂ ಸಹಕಾರಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT