ಬೀಜಿಂಗ್: ಚೀನಾದ 57 ವರ್ಷದ ಜಾಂಗ್ ಬೊ ಎಂಬವರು ಎರಡನೇ ಬಾರಿ ವಿಮಾನದಲ್ಲಿ ವಿಶ್ವ ಪರ್ಯಟನೆ ಪೂರ್ಣಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಷಿಕಾಗೊ ವಿಮಾನ ನಿಲ್ದಾಣದಿಂದ ಏಪ್ರಿಲ್ 2 ರಂದು ಪರ್ಯಟನೆ ಆರಂಭಿಸಿದ್ದ ಜಾಂಗ್ ಅವರು, 68 ದಿವಸಗಳಲ್ಲಿ ಮೂರು ಭೂಖಂಡಗಳ 21 ದೇಶಗಳಲ್ಲಿ ಮತ್ತು ಮೂರು ಸಮುದ್ರಗಳ ಮೇಲೆ ಹಾರಾಟ ನಡೆಸಿದ್ದರು ಎಂದೂ ಹೇಳಿವೆ.

2016ರಲ್ಲಿಅವರು ವಿಮಾನದಲ್ಲಿ ಮೊದಲ ವಿಶ್ವಪರ್ಯಟನೆ ನಡೆಸಿದ್ದರು.

‘ಷಿಕಾಗೊದಿಂದ ಹಾರಾಟ ಆರಂಭಿಸಿ ಆರ್ಕ್ಟಿಕ್ ಮೂಲಕ ಪ್ರಯಾಣ ಬೆಳೆಸುವಾಗ ಹೆಚ್ಚು ಪ್ರಯಾಸ ಅನುಭವಿಸಬೇಕಾಯಿತು. ಈ ಪ್ರದೇಶದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗಿ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು’ ಎಂದು ಜಾಂಗ್ ಅನುಭವ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.