ಡೆಟ್ರಾಯಿಟ್: ಡೆಟ್ರಾಯಿಟ್ನ ಮೊದಲ ಮಹಿಳಾ ಮೇಯರ್ ಆಗಿ ಮೇರಿ ಶೆಫೀಲ್ಡ್ ಅವರು ಆಯ್ಕೆಯಾಗಿದ್ದಾರೆ. ಸದ್ಯ ಅವರು ಸಿಟಿ ಕೌನ್ಸಿಲ್ ಅಧ್ಯಕ್ಷೆ ಆಗಿದ್ದಾರೆ.

ಪ್ರಮುಖ ಚರ್ಚ್ವೊಂದರ ಪ್ರಸಿದ್ಧ ಪಾದ್ರಿ ಸೊಲೊಮನ್ ಕಿನ್ನೊಚ್ ಅವರನ್ನು ಶೆಫೀಲ್ಡ್ ಸಾರ್ವತ್ರಿಕ ಚುನಾವಣೆಯಲ್ಲಿ ಮಂಗಳವಾರ ಪರಾಭವಗೊಳಿಸಿದ್ದಾರೆ. ಮೇಯರ್ ಆಗಿ ಜನವರಿಯಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

2013ರಲ್ಲಿ ಶೆಫೀಲ್ಡ್ ತಮ್ಮ 26ನೇ ವಯಸ್ಸಿನಲ್ಲಿ ಸಿಟಿ ಕೌನ್ಸಿಲ್ಗೆ ಆಯ್ಕೆಯಾಗಿದ್ದು, 2022ರಲ್ಲಿ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು.

‘ಡೆಟ್ರಾಯಿಟ್ನ ಮಕ್ಕಳಿಗೆ ಶಿಕ್ಷಣ ನೀಡುವ ಕಡೆ ಹೆಚ್ಚು ಗಮನ ನೀಡುತ್ತೇನೆ. ಸಾರ್ವಜನಿಕರ ಸುರಕ್ಷತೆ ಮತ್ತು ಜೀವನಮಟ್ಟ ಸುಧಾರಿಸುವುದು ಚುನಾಯಿತ ಮೇಯರ್ ಆಗಿ ನನ್ನ ಆದ್ಯತೆಯಾಗಿದೆ’ ಎಂದು ಮೇರಿ ಶೆಫೀಲ್ಡ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.