ವಾಷಿಂಗ್ಟನ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸದಸ್ಯರಾಗಿ ವರ್ಜಿನಿಯಾದಿಂದ ಆಯ್ಕೆಯಾದ ಭಾರತ ಮೂಲದ ಅಮೆರಿಕದ ಕಾಂಗ್ರೆಸ್ ಸದಸ್ಯ ಸುಹಾಸ್ ಸುಬ್ರಮಣ್ಯಂ ಅವರು ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಸುಬ್ರಮಣ್ಯಂ ಅವರ ತಾಯಿ ತಮ್ಮ ಮಗ ಪ್ರಮಾಣವಚನ ಸ್ವೀಕಾರ ಮಾಡುವುದನ್ನು ಕಣ್ತುಂಬಿಕೊಂಡರು.

‘ನನ್ನ ತಾಯಿಯು ಭಾರತದಿಂದ ವಲಸೆ ಬಂದು ಡಲ್ಲೆಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆಕೆಯ ಮಗ ಅಮೆರಿಕದ ಕಾಂಗ್ರೆಸ್ನಲ್ಲಿ ವರ್ಜಿನಿಯಾವನ್ನು ಪ್ರತಿನಿಧಿಸಲು ಹೋಗುತ್ತಾನೆ ಎಂದು ನೀವು ಹೇಳಿದ್ದರೆ, ಅವರು ನಿಮ್ಮನ್ನು ನಂಬುತ್ತಿರಲಿಲ್ಲ. ನಾನು ಕಾಂಗ್ರೆಸ್ನಲ್ಲಿ ವರ್ಜೀನಿಯಾದ 10ನೇ ಪ್ರತಿನಿಧಿಯಾಗಿದ್ದೇನೆ’ ಎಂದು ಸುಬ್ರಮಣ್ಯಂ ಹೇಳಿದ್ದಾರೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಮಾಜಿ ನೀತಿ ಸಲಹೆಗಾರರಾಗಿದ್ದ ಸುಬ್ರಹ್ಮಣ್ಯಂ ಅವರು 2019 ರಲ್ಲಿ ಮೊದಲ ಬಾರಿಗೆ ವರ್ಜಿನಿಯಾದಿಂದ ಆಯ್ಕೆಯಾಗಿದ್ದರು.

ಪ್ರಯಾಣಿಕರಿಗೆ ಟೋಲ್ ವೆಚ್ಚವನ್ನು ಕಡಿಮೆ ಮಾಡಲು, ಅಧಿಕ ಶುಲ್ಕ ವಿಧಿಸಿದ ಗ್ರಾಹಕರಿಗೆ ಮರುಪಾವತಿಯನ್ನು ನೀಡಲು, ಬಂದೂಕು ಹಿಂಸಾಚಾರದ ಹೆಚ್ಚಳವನ್ನು ಎದುರಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣಕ್ಕೆ ಪ್ರವೇಶ ನೀಡುವುದು ಸೇರಿದಂತೆ ಸುಬ್ರಹ್ಮಣ್ಯಂ ಅವರು ಮಹತ್ವದ ಶಾಸನಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನೊಂದೆಡೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ ಚುನಾಯಿತರಾದ ಮೊದಲ ಹಿಂದೂ ಅಮೇರಿಕನ್ ತುಳಸಿ ಗಬ್ಬಾರ್ಡ್ (43) ಅವರೂ ಕೂಡ ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗಬ್ಬಾರ್ಡ್ ಅವರು ಹದಿಹರೆಯ ವಯಸ್ಸಿನಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಗ ಅವರು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಸ್ಥಾನಕ್ಕೆ ನಾಮನಿರ್ದೇಶಕರಾಗಿದ್ದಾರೆ.
.ಭಗವದ್ಗೀತೆ, ಬೈಬಲ್ ಹೆಸರಿನಲ್ಲಿ ಬ್ರಿಟಿಷ್ ಭಾರತೀಯ ಸಂಸದರ ಪ್ರಮಾಣ ವಚನ.US Election: ಇತಿಹಾಸ; ವರ್ಜೀನಿಯಾದಿಂದ ಭಾರತ ಮೂಲದ ಸುಹಾಸ್ ಸುಬ್ರಹ್ಮಣ್ಯಂ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.