ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್‌ನ ಅವಶೇಷ ಪತ್ತೆ

Published 29 ಜುಲೈ 2023, 13:21 IST
Last Updated 29 ಜುಲೈ 2023, 13:21 IST
ಅಕ್ಷರ ಗಾತ್ರ

ಬ್ರಿಸ್ಬೇನ್, ಆಸ್ಟ್ರೇಲಿಯಾ: ಪೆಸಿಫಿಕ್‌ ಮಹಾಸಾಗರದಲ್ಲಿ ಪತನಗೊಂಡಿದ್ದ ಆಸ್ಟ್ರೇಲಿಯಾ ಸೇನಾ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿಗಳು ಕುರುಹು ಇನ್ನು ಸಿಕ್ಕಿಲ್ಲ.

‘ಎಂಆರ್‌ಎಚ್‌ –90 ತೈಪನ್‌’ ಹೆಸರಿನ ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿ ಪತ್ತೆಗೆ ಹಗಲು–ರಾತ್ರಿ ತಪಾಸಣೆ ನಡೆದಿದೆ. ಮೂರು ದೇಶಗಳ ಸೇನೆ ಸಹ ಪೊಲೀಸರ ಜೊತೆಗೆ ಕೈಜೋಡಿಸಿದೆ.

ಆಸ್ಟ್ರೇಲಿಯ, ಅಮೆರಿಕ ಮತ್ತು ವಿವಿಧ ದೇಶಗಳ ಸುಮಾರು 30,000 ಯೋಧರನ್ನು ಒಟ್ಟುಗೂಡಿಸುವ ‘ತಲಿಸ್ಮನ್‌ ಸಬ್ರೆ’ ಕಸರತ್ತಿನ ಕಾರ್ಯಾಚರಣೆಯಲ್ಲಿ ಈ ಹೆಲಿಕಾಪ್ಟರ್ ಭಾಗಿಯಾಗಿತ್ತು. ರಾತ್ರಿ ಕಾರ್ಯಾಚರಣೆ ನಡೆಸುವಾಗ ಮಹಾಸಾಗರದಲ್ಲಿ ಪತನಗೊಂಡಿತ್ತು. 

‘ಕಾಣೆಯಾದ ಹೆಲಿಕಾಪ್ಟರ್‌ನ ಅವಶೇಷಗಳನ್ನು ಪತ್ತೆ ಹಚ್ಚಿದ್ದೇವೆ. ಶೋಧ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ’ ಎಂದು ಕ್ವೀನ್ಸ್‌ಲ್ಯಾಂಡ್‌ ಪೊಲೀಸ್ ಅಧೀಕ್ಷಕ ಡೌಗ್ಲಾಸ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT