ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಗ್ವೆ: ಭಾರತೀಯ ರಾಯಭಾರ ಕಚೇರಿ ಉದ್ಘಾಟಿಸಿದ ಜೈಶಂಕರ್‌

Last Updated 23 ಆಗಸ್ಟ್ 2022, 11:39 IST
ಅಕ್ಷರ ಗಾತ್ರ

ಅಸುನ್‌ಸಿಯೋನ್‌ (ಪೆರಗ್ವೆ) (ಪಿಟಿಐ): ಇಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಪೆರಗ್ವೆಯ ವಿದೇಶಾಂಗ ಸಚಿವ ಜೂಲಿಯೊ ಸೀಸರ್‌ ಅರ್‍ರಿಯೋಲಾ ಜತೆಗೂಡಿ ಉದ್ಘಾಟಿಸಿದರು.

ಕಚೇರಿಯ ಉದ್ಘಾಟನೆಯಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ಹೊಸ ಎತ್ತರಕ್ಕೆ ಏರಲಿದೆ ಎಂದು ಜೂಲಿಯೊ ಸೀಸರ್‌ ಅಭಿಪ್ರಾಯಪಟ್ಟರು.

ಭಾರತದ ಹಿಂದಿನ ಯಾವ ವಿದೇಶಾಂಗ ಸಚಿವರೂ ಪೆರಗ್ವೆಗೆ ಇದುವರೆಗೂ ಭೇಟಿ ನೀಡಿರಲಿಲ್ಲ. ಜತೆಗೆ, ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷ ತುಂಬಿದ ಸಂದರ್ಭವೂ ಇದಾಗಿದ್ದು, ಭೇಟಿಗೆ ಮಹತ್ವ ಬಂದಿದೆ ಎನ್ನಲಾಗಿದೆ. ಪೆರಗ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವರ್ಷದ ಜನವರಿಯಿಂದಲೇ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT