ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಎಂಟು ಅಡಿ ಎತ್ತರದ ಗಾಂಧಿ ಪ್ರತಿಮೆ ಅನಾವರಣ

Published 10 ಅಕ್ಟೋಬರ್ 2023, 12:49 IST
Last Updated 10 ಅಕ್ಟೋಬರ್ 2023, 12:49 IST
ಅಕ್ಷರ ಗಾತ್ರ

ಜೋಹಾನಸ್‌ಬರ್ಗ್‌: ಇಲ್ಲಿನ ಟಾಲ್‌ಸ್ಟಾಯ್‌ ಫಾರ್ಮ್‌ನಲ್ಲಿ ಮಹಾತ್ಮ ಗಾಂಧಿ ಅವರ ಎಂಟು ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. 20ನೇ ಶತಮಾನದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ಗಾಂಧಿ ಅವರು ಟಾಲ್‌ಸ್ಟಾಯ್‌ ಫಾರ್ಮ್‌ನಲ್ಲಿ ನೆಲೆಸಿದ್ದರು.

ಇಲ್ಲಿನ ಭಾರತದ ಹೈಕಮಿಷನರ್‌ ಪ್ರಭಾತ್‌ ಕುಮಾರ್‌ ಅವರು ಭಾನುವಾರ ಈ ಪ್ರತಿಮೆಯನ್ನು ಅನಾವರಣಗೊಳಿಸಿದರು. ‘ಗಾಂಧಿ ಅವರು 1910ರಿಂದ 1914ರ ಅವಧಿಯಲ್ಲಿ ಈ ಫಾರ್ಮ್‌ನಲ್ಲಿ ವಾಸಿಸುತ್ತಿದ್ದರು. ಇಲ್ಲಿ ಅವರ ಪ್ರತಿಮೆ ಸ್ಥಾಪಿಸಿರುವುದು, ಅವರಿಗೆ ಸಲ್ಲಿಸುವ ದೊಡ್ಡ ಗೌರವ’ ಎಂದು ಅವರು ಹೇಳಿದರು.

‘ಸಮುದಾಯವನ್ನು ಸ್ವಾವಲಂಬಿಯಾಗಿಸಲು ಗಾಂಧಿ ಅವರ ಸ್ನೇಹಿತ ಹರ್ಮನ್‌ ಕಲ್ಲೆನ್‌ಬಾಚ್‌ ಅವರು ಈ ಜಮೀನನ್ನು ದಾನ ಮಾಡಿದ್ದರು’ ಎಂದು ಕುಮಾರ್‌ ಸ್ಮರಿಸಿದರು.

‘ಇಲ್ಲಿನ ತಾರತಮ್ಯದ ಕಾನೂನುಗಳ ವಿರುದ್ಧ ನಮ್ಮ ಸಮುದಾಯದ ಜನರು ಹೋರಾಡುತ್ತಿದ್ದರು. ಅನೇಕ ಪುರುಷರು ಮತ್ತು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಗಾಂಧಿ ಅವರೊಂದಿಗೆ ಜೈಲಿಗೆ ಹೋಗಿದ್ದರು’ ಎಂದು ಅವರು ಹೇಳಿದರು.

ಮಹಾತ್ಮ ಗಾಂಧಿ ಸ್ಮರಣಾರ್ಥ ಸಂಸ್ಥೆ ಮತ್ತು ಅದರ ಮುಖ್ಯಸ್ಥರಾದ ಮೋಹನ್ ಹೀರಾ ಅವರು ಟಾಲ್‌ಸ್ಟಾಯ್ ಫಾರ್ಮ್ ಅನ್ನು ಪುನರುಜ್ಜೀವನಗೊಳಿಸುವ ಶ್ಲಾಘನೀಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT