ಸಾವೊ ಪೌಲ್: ಬ್ರೆಜಿಲ್‌ನಲ್ಲಿ ಸೆನ್ಸಾರ್ ಶಿಪ್‌ಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ತನ್ನ ಕಾರ್ಯಾಚರಣೆ ಬಂದ್ ಮಾಡಿದೆ.
ಬ್ರೆಜಿಲ್ ಸುಪ್ರೀಂ ಕೋರ್ಟ್ ಎಕ್ಸ್‌ಗೆ ಸೆನ್ಸಾರ್ ಮಾಡುವಂತೆ ಆದೇಶ ನೀಡಿದ್ದರಿಂದ ಸಾಮಾಜಿಕ ಜಾಲತಾಣ ಎಕ್ಸ್ ಇಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸುವುದಾಗಿ ಶನಿವಾರ ಘೋಷಣೆ ಮಾಡಿತು.
ಆದಾಗ್ಯೂ ಇದು ತಾತ್ಕಾಲಿಕ ಎಂದು ಮಾಧ್ಯಮಗಳು ವರದಿ ಮಾಡಿವೆ.
ನ್ಯಾಯಾಲಯದ ಕಠಿಣ ಕಾನೂನುಗಳನ್ನು ಪಾಲಿಸುವುದು ಕಷ್ಟ. ಆದಾಗ್ಯೂ ಕೆಲ ದಿನಗಳ ಬಳಿಕ ಅಲ್ಲಿನ ನಾಗರಿಕರಿಗೆ ಎಕ್ಸ್ ಲಭ್ಯವಾಗಲಿದೆ ಎಂದು ಎಲಾನ್ ಮಸ್ಕ್ ಅವರ ಒಡೆತನದ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಬ್ರೆಜಿಲ್ ಸುಪ್ರೀಂ ಕೋರ್ಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.