ಏರ್ಪೋರ್ಸ್ ಒನ್: ಕ್ಯೂಬಾವನ್ನು ವಿಫಲ ರಾಷ್ಟ್ರ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದ್ವೀಪ ರಾಷ್ಟ್ರವು ಮರಳಿ ತನ್ನ ಸ್ಥಿತಿಗೆ ಬರಲು ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.

ಕ್ಯೂಬಾದ ಮೇಲೆ ಮಿಲಿಟರಿ ಕಾರ್ಯಾಚರಣೆ ಮಾಡುವ ನಿರ್ಧಾರವನ್ನು ಅಲ್ಲಗಳೆದಿರುವ ಟ್ರಂಪ್, ಆ ದೇಶ ಈಗಾಗಲೇ ಸೋತಿದೆ. ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಮಾತ್ರ ಅವರಿಗೆ ಉಳಿದಿರುವ ಏಕೈಕ ದಾರಿ ಎಂದು ತಿಳಿಸಿದ್ದಾರೆ.

ವೆನುಜುವೆಲಾದಂತೆ ಕ್ಯೂಬಾದಲ್ಲಿ ಸರ್ಕಾರವನ್ನು ಕೆಳಗಿಳಿಸುವ ಪ್ರಯತ್ನವನ್ನು ಮಾಡುವುದಿಲ್ಲ. ಅಮೆರಿಕಗೆ ಅದರ ಅವಶ್ಯಕತೆಯಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕ್ಯೂಬಾಗೆ ಅಮೆರಿಕವು ದಶಕಗಳಿಂದ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿರುವುದರಿಂದ ದ್ವೀಪ ರಾಷ್ಟ್ರದಲ್ಲಿ ಅರಾಜಕತೆ ಹಾಗೂ ತೀವ್ರ ಇಂಧನ ಕೊರತೆ ಉಂಟಾಗಿದೆ.

ಕ್ಯೂಬಾಗೆ ಇಂಧನ ಕಳಿಸದಿರುವಂತೆ ಅಮೆರಿಕವು ಇತರ ದೇಶಗಳ ಮೇಲೆ ಒತ್ತಡ ಹೇರುತ್ತಿದೆ.

ಕ್ಯೂಬಾದಲ್ಲಿ ಇಂಧನ ಕೊರತೆ ಉಂಟಾಗಿರುವುದು ಮಾನವೀಯ ಬೆದರಿಕೆ ಎಂದು ಒಪ್ಪಿಕೊಂಡಿರುವ ಟ್ರಂಪ್, ಆದಷ್ಟು ಬೇಗ ಅವರು ಒಪ್ಪಂದಕ್ಕೆ ಮುಂದಾಗುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.