ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್‌ ಕುತಂತ್ರಾಂಶ ಖರೀದಿ ದೃಢಪಡಿಸಿದ ಎಫ್‌ಬಿಐ

ಗುಣಮಟ್ಟ ಪರೀಕ್ಷೆಗೆ ಸೀಮಿತ, ತನಿಖೆಗೆ ಬಳಸಿಲ್ಲ: ಸ್ಪಷ್ಟನೆ
Last Updated 3 ಫೆಬ್ರುವರಿ 2022, 18:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಎಪಿ):ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಸಂಸ್ಥೆಯಿಂದ ಪೆಗಾಸಸ್‌ ಬೇಹುಗಾರಿಕೆಕುತಂತ್ರಾಂಶಖರೀದಿ ಮಾಡಿರುವುದನ್ನುಅಮೆರಿಕದ ಎಫ್‌ಬಿಐ ದೃಢಪಡಿಸಿದ್ದು, ಇದನ್ನು ಪ್ರಯೋಗ ಮತ್ತು ಗುಣಮಟ್ಟದ ಪರೀಕ್ಷೆಗೆ ಮಾತ್ರ ಬಳಸಲಾಗಿದೆ. ತನಿಖೆಯ ಉದ್ದೇಶಕ್ಕೆ ಬಳಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಪತ್ರಕರ್ತರು, ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸುವ ವಿಶ್ವದಅತ್ಯಂತ ಪ್ರಬಲಕುತಂತ್ರಾಂಶ ಪೆಗಾಸಸ್‌ ಅನ್ನು ಭಾರತ ಖರೀದಿಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಈಚೆಗೆ ವರದಿ ಮಾಡಿತ್ತು. ಆದರೆ, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಬೆಳೆಯುತ್ತಿರುವಅತ್ಯಾಧುನಿಕ ತಂತ್ರಜ್ಞಾನ ಮತ್ತುವ್ಯಾಪಾರೋದ್ಯಮದ ದೃಷ್ಟಿಯಿಂದ ಇಸ್ರೇಲ್‌ ಸಂಸ್ಥೆಯಿಂದ ಸೀಮಿತ ಪರವಾನಗಿಯಲ್ಲಿ ಪೆಗಾಸಸ್‌ ಅನ್ನು ಖರೀದಿಸಲಾಗಿತ್ತು.ಇದರಿಂದ ಪರೀಕ್ಷೆ ಹಾಗೂ ಗುಣಮಟ್ಟದ ಮೌಲ್ಯ ಮಾಪನ ನಡೆಸಲಾಗಿತ್ತೇ ಹೊರತು ಯಾವುದೇ ಕಾರ್ಯಾಚರಣೆಗೆ ಬಳಸಿಲ್ಲ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಯೋಗ ಮತ್ತುಮೌಲ್ಯಮಾಪನ ಅಂತ್ಯಗೊಂಡಿರುವುದರಿಂದ ಪೆಗಾಸಸ್‌ ಕುತಂತ್ರಾಂಶವನ್ನುಮುಂದುವರಿಸದೆ ಇರಲು ನಿರ್ಧರಿಸಲಾಗಿದೆ. ಇನ್ನು ಮುಂದೆಪರವಾನಗಿಯೂ ಸಕ್ರಿಯವಾಗಿರುವುದಿಲ್ಲ. ಕುತಂತ್ರಾಂಶ ಕೂಡ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

ಉದ್ದೇಶ ಇಷ್ಟೇ ಆಗಿದ್ದರೆ, ವಿಶ್ವದ ಕುಖ್ಯಾತ ಬೇಹುಗಾರಿಕೆಕುತಂತ್ರಾಂಶಕ್ಕೆ ಅಮೆರಿಕದ ಕಾನೂನು ನಿರ್ದೇಶನಾಲಯ ಏಕೆ ಹಣ ಪಾವತಿಸಬೇಕಿತ್ತು ಎಂಬ ಟೀಕೆ ವ್ಯಕ್ತವಾಗಿದೆ. ಎಫ್‌ಬಿಐ ವಕ್ತಾರರು ಎನ್‌ಎಸ್‌ಒ ಗ್ರೂಪ್‌ ಸಂಸ್ಥೆಗೆ ಹಣ ಪಾವತಿಸಿರುವ ಕುರಿತು ಪ್ರತಿಕ್ರಿಯಿಸಿಲ್ಲ. ಆದರೆ, ಒಂದು ವರ್ಷದ ಪರವಾನಗಿಗಾಗಿ ಐದು ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು ₹37.36 ಕೋಟಿ) ಪಾವತಿ ಮಾಡಿರುವ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT