ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಲ್ಮಾನರ ಹಕ್ಕುಗಳ ರಕ್ಷಣೆ: ಭಾರತಕ್ಕೆ ಬರಾಕ್‌ ಒಬಾಮ ಎಚ್ಚರಿಕೆ

Published 23 ಜೂನ್ 2023, 23:32 IST
Last Updated 23 ಜೂನ್ 2023, 23:32 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಅಲ್ಪಸಂಖ್ಯಾತ ಮುಸಲ್ಮಾನರ ಹಕ್ಕುಗಳನ್ನು ಗೌರವಿಸದೇ ಇದ್ದಲ್ಲಿ ಭಾರತ ಪ್ರತ್ಯೇಕವಾಗಿ ಉಳಿಯುವ ಅಪಾಯವಿದೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಎಚ್ಚರಿಸಿದ್ದಾರೆ.

ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಅವರು, ಮೈತ್ರಿ ರಾಷ್ಟ್ರಗಳ ಜೊತೆಗೆ ಮಾನವ ಹಕ್ಕುಗಳ ವಿಷಯದ ಚರ್ಚೆ ಎಂದಿಗೂ ಸಂಕೀರ್ಣವಾದುದು. ಪ್ರಧಾನಿ ಮೋದಿ ಅವರ ಜೊತೆಗಿನ ಭೇಟಿಯಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರ ರಕ್ಷಣೆ ಕುರಿತು ಅಧ್ಯಕ್ಷರು ಪ್ರಸ್ತಾಪಿಸುವುದು ಅಗತ್ಯ‘ ಎಂದು ಗುರುವಾರ ಹೇಳಿದರು. 

ಮೋದಿ ಅವರ ಜೊತೆಗೆ ಚರ್ಚೆಗೆ ಅವಕಾಶವಿದ್ದರೆ, ನೀವು ಭಾರತದಲ್ಲಿ ಮುಸಲ್ಮಾನರ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡದೇ ಇದ್ದರೆ, ಭಾರತ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಅವರ ಗಮನಕ್ಕೆ ತರುತ್ತೇನೆ ಎಂದರು.

ಭಾರತದಲ್ಲಿನ ದೊಡ್ಡಮಟ್ಟದ ಆಂತರಿಕ ತಿಕ್ಕಾಟ ಗಮನಿಸಿದರೆ ನಿಮಗೆ ಏನಾಗುತ್ತಿದೆ ಎಂದು ತಿಳಿಯಲಿದೆ. ಅದು, ಮುಸ್ಲಿಂ ಇಂಡಿಯಾ ಅಷ್ಟೇ ಅಲ್ಲದೆ, ಹಿಂದೂ ಇಂಡಿಯಾ ಹಿತಾಸಕ್ತಿಗೂ ವಿರೋಧಾಭಾಸವಾದುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT