ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಕದನ ವಿರಾಮಕ್ಕೆ ಇಸ್ರೇಲ್‌ ಹೊಸ ಪ್ರಸ್ತಾವ: ಹಮಾಸ್‌ ಪರಿಶೀಲನೆ

Published 27 ಏಪ್ರಿಲ್ 2024, 15:28 IST
Last Updated 27 ಏಪ್ರಿಲ್ 2024, 15:28 IST
ಅಕ್ಷರ ಗಾತ್ರ

ಕೈರೋ: ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್‌ ಮುಂದಿಟ್ಟಿರುವ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ಯಾಲೆಸ್ಟೀನ್‌ನ ಬಂಡುಕೋರ ಸಂಘಟನೆ ಹಮಾಸ್ ಶನಿವಾರ ಹೇಳಿದೆ.

ಈಜಿಪ್ಟ್‌ನ ಉನ್ನತ ಮಟ್ಟದ ನಿಯೋಗವು ಇಸ್ರೇಲ್‌ಗೆ ಭೇಟಿ ನೀಡಿದ ಕೆಲವೇ ಗಂಟೆಗಳ ನಂತರ ಹಮಾಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

ಗಾಜಾದಲ್ಲಿ ಸುದೀರ್ಘ ಕದನ ವಿರಾಮಕ್ಕಾಗಿ ‘ಹೊಸ ನೋಟ’ ಕುರಿತು ಟೆಲ್‌ ಅವೀವ್‌ನಲ್ಲಿ ಚರ್ಚಿಸಲಾಯಿತು ಎಂದು ಹೆಸರು ಬಹಿರಂಗಪಡಿಸಲು ಬಯಸದ ಈಜಿಪ್ಟ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಜಾ ಪಟ್ಟಿಯಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಕೊನೆಗೊಳಿಸಲು ಮತ್ತು ದಕ್ಷಿಣ ಗಾಜಾ ನಗರ ರಾಫಾದಲ್ಲಿ ಇಸ್ರೇಲ್‌ ನಡೆಸಲಿರುವ ಸಂಭವನೀಯ ಭೂ ದಾಳಿಯನ್ನು ತಡೆಯುವ ಸಲುವಾಗಿ ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್‌ ಶಾಂತಿ ಮಾತುಕತೆಯನ್ನು ತೀವ್ರಗೊಳಿಸಿದೆ.

‘ಇಸ್ರೇಲ್‌ ಇಟ್ಟಿರುವ ಈ ಪ್ರಸ್ತಾವನೆಯ ಸಾಧಕ–ಬಾಧಕಗಳ ಮೌಲ್ಯಮಾಪನವನ್ನು ಪ್ಯಾಲೆಸ್ಟೀನ್‌ನ ಬಂಡಕೋರರ ಗುಂಪು ನಡೆಸುತ್ತಿದೆ. ಪ್ರಸ್ತಾವನೆಯ ಸಂಪೂರ್ಣ ಅಧ್ಯಯನ ಮಾಡಿದ ನಂತರ ನಿಲುವು ಪ್ರಕಟಿಸಲಾಗುವುದು’ ಎಂದು ಹಮಾಸ್‌ ಹಿರಿಯ ಅಧಿಕಾರಿ ಖಲೀಲ್ ಅಲ್‌ ಹಯ್ಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT