ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳಕ್ಕೆ ಭಾರತದಿಂದ 75 ಆಂಬುಲೆನ್ಸ್‌, 17 ಶಾಲಾ ಬಸ್‌ ಕೊಡುಗೆ

ದ್ವಿಪಕ್ಷೀಯ ಸಂಬಂಧ ವೃದ್ಧಿ ಉದ್ದೇಶ
Last Updated 3 ಜುಲೈ 2022, 13:40 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಭಾರತವು ನೇಪಾಳಕ್ಕೆ 75 ಆಂಬುಲೆನ್ಸ್‌ ಮತ್ತು 17 ಶಾಲಾ ಬಸ್‌ಗಳನ್ನು ಭಾನುವಾರ ಕೊಡುಗೆಯಾಗಿ ನೀಡಿದೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ಹಾಗೂ ನೇಪಾಳದ ಆರೋಗ್ಯ, ಶೈಕ್ಷಣಿಕ ಕ್ಷೇತ್ರದ ಮೂಲ ಸೌಕರ್ಯ ವೃದ್ಧಿಗೆ ನೆರವಾಗುವ ಉದ್ದೇಶದಿಂದ ಈ ಕೊಡುಗೆ ನೀಡಿದೆ.

‘ನೇಪಾಳದಲ್ಲಿನ ಭಾರತ ರಾಯಭಾರಿ ನವೀನ್‌ ಶ್ರೀವಾಸ್ತವ ಅವರು, ನೇಪಾಳದ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ದೇವೇಂದ್ರ ಪೌದೆಲ್‌ ಅವರ ಸಮ್ಮುಖದಲ್ಲಿ ಶಾಲಾ ವಾಹನಗಳ ಕೀಲಿಗಳನ್ನು ಹಸ್ತಾಂತರಿಸಿದರು. ಇದೇ ವೇಳೆ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಸ್ಮರಣಾರ್ಥ 75 ಆಂಬುಲೆನ್ಸ್‌ಗಳನ್ನು ಕೊಡುಗೆ ನೀಡಿದರು’ ಎಂದು ಭಾರತ ರಾಯಭಾರ ಕಚೇರಿ ತಿಳಿಸಿದೆ.

2021ರ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತ 39 ವೆಂಟಿಲೇಟರ್‌ ಸಹಿತ ಆಂಬುಲೆನ್ಸ್‌ಗಳನ್ನು ನೇಪಾಳಕ್ಕೆ ಕೊಡುಗೆಯಾಗಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT